ನೀರು ತುಂಬಿದ ಬಕೆಟ್ ಒಳಗೆ ಬಿದ್ದು ಒಂದೂವರೇ ವರ್ಷದ ಮಗು ದಾರುಣ ಸಾವು:  ಸುರತ್ಕಲ್ ಸಮೀಪ ನಡೆಯಿತು ಹೃದಯವಿದ್ರಾವಕ ಘಟನೆ

ಮಂಗಳೂರು: ನೀರು ತುಂಬಿದ ಬಕೆಟ್ ಒಳಗೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸುರತ್ಕಲ್ ಸಮೀಪ ನಡೆದಿದೆ.

ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ವಾಸವಿರುವ ನಝೀರ್ ಎಂಬವರ ಒಂದೂವರೆ ವರ್ಷ ಪ್ರಾಯದ ಮಗು ಮೃತಪಟ್ಟಿದ್ದು ತಂದೆ ಮಗುವನ್ನು ಮಲಗಿಸಿ ಹೊರ ಹೋಗಿದ್ದರು ತಾಯಿ ಮನೆ ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಎದ್ದು ಹೋದ ಮಗು ಬಚ್ಚಲು ಮನೆಯಲ್ಲಿ ಬಕೆಟ್ ನಲ್ಲಿ ತುಂಬಿಸಿಟ್ಟಿದ್ದ ಅರ್ಧದಷ್ಟು ನೀರಿಗೆ ಆಟವಾಡಲು ಇಣುಕಿದಾಗ ಆಯ ತಪ್ಪಿ ಮಗು ತಲೆಕೆಳಗಾಗಿ ಬಕೆಟ್ ಒಳಗೆ ಬಿದ್ದಿದೆ. ತಾಯಿ ಕೆಲಸ ಮುಗಿಸಿ ಮಲಗಿದ ಮಗುವನ್ನು ಬಂದ್ದು ನೋಡಿದಾಗ ಮಗು ಕಾಣದೆ ಇಲ್ಲದಿರುವುದನ್ನು ಗಮನಿಸಿ ಸುತ್ತಮುತ್ತ ಹುಡುಕಾಡಿ ಬಚ್ಚಲು ಮನೆಯಲ್ಲಿ ಹೋಗಿ ನೋಡಿದಾಗ ಬಕೆಟ್ ಒಳಗೆ ತಲೆಕೆಳಗಾಗಿ ಮಗು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಅದಾಗಲೇ ಮಗು ಮೃತಪಟ್ಟಿತ್ತು.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!