ಪತ್ರಕರ್ತ ಮನೋಹರ್ ಬಳೆಂಜ ಅವರ ಪುತ್ರಿ ದತಿ ಸ್ಮರಣಾರ್ಥ ದತ್ತಿ ನಿಧಿ ಹಸ್ತಾಂತರ

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮನೋಹರ್ ಬಳೆಂಜ ಲಿಖಿತ ದಂಪತಿಗಳು ತನ್ನ ಪುತ್ರಿ ದಿತಿಯ ನೆನಪಿನಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಧತ್ತಿ ನಿಧಿಯನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಹಸ್ತಾಂತರಿಸಿದರು.

 

ಅಡಿಕೆ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಇಂದಬೆಟ್ಟು ಗ್ರಾಮದ ರಮೇಶ್ ಗೌಡ, ಮರದಿಂದ ಬಿದ್ದು ಎರಡು ಕೈಗಳಿಗೆ ಗಾಯವಾಗಿದ್ದ ಬಳೆಂಜ ನಾಲ್ಕೂರು ಗ್ರಾಮದ ಬಾಲಕನಿಗೆ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಬೆಳಕು ಬೆಳ್ತಂಗಡಿ ಹಾಗೂ ಗುರು ಬೆಳದಿಂಗಳು ಕುದ್ರೋಳಿ ಸಂಸ್ಥೆಗಳಿಗೆ ದಿತಿ ದತ್ತಿ ನಿಧಿ ಹಸ್ತಾಂತರಿಸಲಾಯಿತು.

 

 

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಕೆ. ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು, ತಾ.ಪಂ. ಇಒ ಕುಸುಮಾಧರ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ದತ್ತಿ ನಿಧಿ ಕೊಡಲಾಯಿತು.

error: Content is protected !!