ಲಾಯಿಲ ಕನ್ನಾಜೆ ಕಂಟೋನ್ಮೆಂಟ್ ವಲಯದ ಮನೆಗಳಿಗೆ ಆಹಾರ ಕಿಟ್ ವಿತರಣೆ: ಗ್ರಾ.ಪಂ ಸದಸ್ಯೆಯಿಂದ ದಾನಿಗಳ ಸಹಕಾರದೊಂದಿಗೆ ಆಹಾರ ಕಿಟ್ ವ್ಯವಸ್ಥೆ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡನೇ ವಾರ್ಡಿನ ಕನ್ನಾಜೆ ಬಡಾವಣೆಯಲ್ಲಿ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಈ ಪ್ರದೇಶವನ್ನು ಕಂಟೋನ್ಮೆಂಟ್ ವಲಯವೆಂದು ಘೋಷಿಸಲಾಗಿತ್ತು. ಈ ಮನೆಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ‌‌

ಪಾಸಿಟಿವ್ ಪ್ರಕರಣಗಳಿರುವ ವ್ಯಕ್ತಿಗಳನ್ನು ‌ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈ ಪರಿಸರದ ಹೆಚ್ಚಿನ ಜನರು ಕೂಲಿ ಕೆಲಸಕ್ಕೆ ಹಾಗೂ ಇನ್ನಿತರ ದಿನಗೂಲಿ ಕೆಲಸಕ್ಕೆ ಹೋಗುವವರಾಗಿದ್ದು ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಮನಗಂಡು, ಎರಡನೇ ವಾರ್ಡಿನ ಸದಸ್ಯರಾದ ರಜನಿ ಎಂ.ಆರ್. ಅವರು ತಕ್ಷಣ ಸ್ಪಂದಿಸಿ, ಪಾಸಿಟಿವ್ ಪ್ರಕರಣಗಳು ಇರುವ ಮನೆಗಳಿಗೆ ಉತ್ತಮ ರೀತಿಯ ಆಹಾರ ಸಾಮಾಗ್ರಿಗಳ ಕಿಟ್ ನೀಡಬೇಕು ಎಂಬ ಉದ್ಧೇಶದಿಂದ ತನ್ನ ಪತಿಯ ಸಹಕಾರದೊಂದಿಗೆ ಕಿಟ್ ವಿತರಣೆಗೆ ನಿರ್ಧರಿಸಿದರು. ‌ ದಾನಿಗಳಾದ ಅಳದಂಗಡಿ ಸತ್ಯದೇವತಾ ದೈವಸ್ಥಾನ ಆಡಳಿತ ಟ್ರಸ್ಟ್, ಮೋಹನ ಗುರಿಂಗಾನ, ಗುತ್ತಿಗೆದಾರರಾದ ಎ.ಕೆ. ಚಂದ್ರಪಾಲ್, ಭವಾನಿ ಸಿಸ್ಟರ್, ಗಿರಿಯಪ್ಪ ಇವರ ಬಳಿ ವಾರ್ಡಿನ ಪರವಾಗಿ ಕಿಟ್ ನೀಡುವ ಕುರಿತು ಮನವಿ ಮಾಡಿದ್ದು, ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ದಾನಿಗಳ ನೆರವಿನಿಂದ ಆಹಾರ ಕಿಟ್ ಹಾಗೂ ತರಕಾರಿಯನ್ನು ಮನೆ ಮನೆಗೆ ಭೇಟಿ ನೀಡಿ ಹಂಚಲಾಯಿತು.

ಈ ಸಂದರ್ಭದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ದಾನ, ಉಪಾಧ್ಯಕ್ಷ ಗಣೇಶ್ ಆರ್. ಎ.ಕೆ. ಚಂದ್ರಪಾಲ್, ಕೊರೊನಾ ವಾರಿಯರ್ಸ್ ಪ್ರಶಾಂತ್ ಕನ್ನಾಜೆ ಉಪಸ್ಥಿತರಿದ್ದರು. ತಾ.ಪಂ ಮಾಜಿ ಸದಸ್ಯ ಸುಧಾಕರ್ ಬಿ.ಎಲ್. ಕಿಟ್ ನೀಡಿದ ದಾನಿಗಳಿಗೆ ವಾರ್ಡಿನ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದರು.

ತರಕಾರಿ ಕಿಟ್ ವಿತರಣೆ

ಪಂಚಾಯತ್ ಅಧ್ಯಕ್ಷರಾದ ಆಶಾ ಬೆನಡಿಕ್ಟ ಸಲ್ಡಾನ ಹಾಗೂ ಉಪಾಧ್ಯಕ್ಷರಾದ ಗಣೇಶ್. ಆರ್. ಇವರು ತರಕಾರಿಯ ಕಿಟನ್ನೂ ಈ ಸಂದರ್ಭದಲ್ಲಿ ಪ್ರತೀ ಮನೆ ಮನೆಗೆ ಭೇಟಿ ಕೊಟ್ಟು ನೀಡಿದರು.

error: Content is protected !!