ಬೆಳ್ತಂಗಡಿಗೆ ಮತ್ತೆ ಶಾಕಿಂಗ್ ನ್ಯೂಸ್!: ಬಡಾವಣೆಯೊಂದರಲ್ಲಿ 25ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು!: 50ಕ್ಕೂ ಅಧಿಕ ಮನೆಗಳಿರುವ ಪ್ರದೇಶ: ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್

 

ಬೆಳ್ತಂಗಡಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸ್ವಲ್ಪ ಮಟ್ಟದಲ್ಲಿ ಕಡಿಮೆಯಾಗುತಿದೆಯಾದರೂ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸೋಂಕಿನ‌ ಪ್ರಮಾಣ ಹೆಚ್ಚಾಗುತ್ತಾ ಇದೆ.‌ ಬೆಳ್ತಂಗಡಿ ತಾಲೂಕು ಜಿಲ್ಲೆಯಲ್ಲೇ ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿದೆ. ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡನೇ ವಾರ್ಡಿನ ಕನ್ನಾಜೆ ಸಮೀಪದ ದುರ್ಗಾನಗರದ ಬಡಾವಣೆಯೊಂದರಲ್ಲಿ 28 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಲಾಯಿಲ ಗ್ರಾಮದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟಗೊಂಡಿದೆ. ಈಗಾಗಲೇ 50 ಕ್ಕಿಂತಲೂ ಅಧಿಕ ಮನೆಗಳಿರುವ ಈ ಪ್ರದೇಶಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು. ಎಲ್ಲರೂ ಆತಂಕ ಪಡುವಂತಾಗಿದೆ.

ಕೋವಿಡ್ ಕೇರ್ ಸೆಂಟರ್ ಗೆ ತೆರಳಲು ನಿರಾಕರಿಸಿದ ಮನೆ ಮಂದಿ:

ಕೊರೊನಾ ಸೋಂಕು ಲಕ್ಷಣ ಇರುವವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸುವ ಬಗ್ಗೆ ಅಂಬುಲೆನ್ಸ್ ಸ್ಥಳಕ್ಕೆ ಬಂದಾಗ ಯಾರೂ ಕೂಡ ಕೋವಿಡ್ ಕೇರ್ ಸೆಂಟರ್ ತೆರಳಲು ಸಿದ್ಧರಿರಲಿಲ್ಲ ಮನೆಯಲ್ಲಿ ತಂದೆ ತಾಯಿಗೆ ಪಾಸಿಟಿವ್ ಬಂದಿದೆ ಚಿಕ್ಕ ಮಕ್ಕಳನ್ನು ಬಿಟ್ಟು ಹೋಗುವುದಾದರೂ ಹೇಗೆ ಅದಲ್ಲದೆ ಕೆಲವು ಮನೆಯಲ್ಲಿ ವಯಸ್ಸಾದವರು ಇದ್ದಾರೆ ಅವರನ್ನು ನೋಡಿಕೊಳ್ಳುವವರು ಯಾರು ಎಂಬ ಕಾರಣಗಳನ್ನು ನೀಡಿ ಹೋಗಲು ನಿರಾಕರಿಸಿದರೆನ್ನಲಾಗಿದೆ. ಪಂಚಾಯತ್ ಅಧಿಕಾರಿಗಳು ಆಡಳಿತ ಮಂಡಳಿ , ಪೊಲೀಸ್ ಅಧಿಕಾರಿಗಳು ಮನವೊಲಿಸಿದರೂ ಅಲ್ಲಿ ಹೋಗುವುದಿಲ್ಲ ಈ ಪ್ರದೇಶವನ್ನು ಸೀಲ್ ಡೌನ್ ಮಾಡಿ ಯಾರೂ ಕೂಡ ಹೊರ ಹೋಗದಂತೆ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದರು. ಇನ್ನು ನಾಳೆಯ ವರದಿ ನೋಡಿ ಸೀಲ್ ಡೌನ್ ಯಾವ ರೀತಿ ಮಾಡಬಹುದು ಎಂದು ಅಧಿಕಾರಿಗಳು ತಿರ್ಮಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.

59 ಮನೆಯ 110 ಮಂದಿಯ ಗಂಟಲ ದ್ರವ ಪರೀಕ್ಷೆ.

ಬಡಾವಣೆಯ 59 ಮನೆಯ ಸುಮಾರು 110ಕ್ಕಿಂತಲೂ ಅಧಿಕ ಮಂದಿಯ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಇದರ ವರದಿ ನಾಳೆ ಬರಲಿದ್ದು ಅದರಲ್ಲಿ ಎಷ್ಟು ಪಾಸಿಟಿವ್ ಕೇಸ್ ಬರಲಿದೆ ಎಂದು ಕಾದು ನೋಡಬೇಕಷ್ಟೆ.

error: Content is protected !!