ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಕುಂಡದ ಬೆಟ್ಟು ಕುಬಳಬೆಟ್ಟು ಸಂಪತ್ ಕುಮಾರ್ ಕೊಂಬ ಅವರ ಜಾಗದಲ್ಲಿ ಹರಿಯುವ ಹಳ್ಳದಲ್ಲಿ ಮೇ 14 ರಂದು ಸಂಜೆ 4 ಗಂಟೆ ಹೊತ್ತಿಗೆ ಕಾಣಿಸಿಕೊಂಡಿದ್ದ ಅಪರೂಪದ ನೀರು ನಾಯಿಗಳು ಕಾಣಿಸಿಕೊಂಡಿದ್ದವು. ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಇವತ್ತು ಸಂಜೆಯೂ ಅದೇ ಜಾಗದಲ್ಲಿ ಪುನಃ ಕಾಣಸಿಕ್ಕಿವೆ. ಎಂದು ಸಂಪತ್ ಕುಮಾರ್ ಕೊಂಬ ತಿಳಿಸಿದ್ದಾರೆ.
ಅದಲ್ಲದೆ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಅಧಿಕಾರಿಗಳು ಬಂದ್ದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.