ಬೆಳ್ತಂಗಡಿಯ ಗರ್ಡಾಡಿ ಬಳಿ ಹಳ್ಳದಲ್ಲಿ ನೀರು ನಾಯಿಗಳು ಪತ್ತೆ

 

ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಸಮೀಪದ ಹಳ್ಳದಲ್ಲಿ ಅಪರೂಪದ ನೀರು ನಾಯಿಗಳು ಕಂಡು ಬಂದಿದೆ. ಗರ್ಡಾಡಿ ಸಮೀಪದ ಕುಂಡದಬೆಟ್ಟು ಕುಬಳಬೆಟ್ಟು ಸಮೀಪ ನಿನ್ನೆ ಸಂಜೆ 4 ಗಂಟೆಯ ಸುಮಾರಿಗೆ ನಾಯಿ ಕೂಗುವ ಶಬ್ದ ಕೇಳಿ ಬರುತಿತ್ತು. ಈ ಬಗ್ಗೆ ಹೋಗಿ ನೋಡುವಾಗ ನದಿಗೆ ಸಂಪರ್ಕಗೊಳ್ಳುವ ಹಳ್ಳದಲ್ಲಿ ಸುಮಾರು25 ಕ್ಕಿಂತಲೂ ಅಧಿಕ ನೀರು ನಾಯಿಗಳು ಕಂಡು ಬಂದಿವೆ.

ಈ ಬಗ್ಗೆ ಪ್ರಜಾಪ್ರಕಾಶಕ್ಕೆ ಪ್ರತಿಕ್ರಿಯೆ ನೀಡಿದ ಕುಬಳಬೆಟ್ಟು ಗುತ್ತಿನ ಸಂಪತ್ ಕೊಂಬ ಕಳೆದ ಆಕ್ಟೋಬರ್ ನಲ್ಲಿಯೂ ರಾತ್ರಿ ಹೊತ್ತಿನಲ್ಲಿ ನೀರು ನಾಯಿಗಳು ಕಂಡು ಬಂದಿದ್ದು ಅದರೆ ಇದೀಗ ಹಗಲು ಹೊತ್ತಿನಲ್ಲೂ ಸುಮಾರು 25 ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಇದು ಕಂಡು ಬಂದಿದ್ದು ನಮಗೆಲ್ಲ ಆಶ್ಚರ್ಯ ಉಂಟು ಮಾಡಿದೆ ಎಂದರು. ನಿನ್ನೆಯಿಂದ ತೌಕ್ತೆ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದೆ. ನದಿಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಇದೀಗ ನೀರು ನಾಯಿಗಳು ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಇವುಗಳು ಇಲ್ಲಿ ಕಾಣಿಸಿಕೊಂಡಿರೋದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿವೆ.

error: Content is protected !!