ಸೀಲ್ ಡೌನ್ ಪ್ರದೇಶದ 35 ಮನೆಗೆ ಪಡಿತರ ವಿತರಿಸಿ ಮಾದರಿಯಾದ ಕಳಿಯ ಸಿ.ಎ ಬ್ಯಾಂಕ್

ಗೇರುಕಟ್ಟೆ: ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಸೀಲ್ ಡೌನ್ ಆದ ಸುಮಾರು 35 ಮನೆಗಳಿಗೆ ಪಡಿತರ ವಿತರಿಸಿ .ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘ ಇತರರಿಗೆ ಮಾದರಿಯಾಗಿದೆ. ಕಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಶ್ಮೆರೋಡ್ ಮಾವಿನಕಟ್ಟೆ ಪ್ರದೇಶವವನ್ನು ಸಿಲ್ ಡೌನ್ ಮಾಡಲಾಗಿದ್ದು ಆ ಪ್ರದೇಶದ ಮನೆಗಳಿಗೆ ಪಡಿತರವನ್ನು ತಲುಪಿಸಿದ್ದಾರೆ.

ಮಾವಿನಕಟ್ಟೆ ಪ್ರದೇಶದಲ್ಲಿ ಕೊರೋನಾ ಪ್ರಕರಣವಿದ್ದು, ಈ ಪ್ರದೇಶವನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿತ್ತು. ಇಲ್ಲಿನ ಜನತೆಗೆ ಪಡಿತರ ತೆಗೆದುಕೊಳ್ಳಲು ಅಸಾಧ್ಯವಾದ ಕಾರಣ ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತದೊಂದಿಗೆ ಸಮಾನ ಮನಸ್ಕ ತಂಡದ ಯುವಕರು ಮಾತುಕತೆ ನಡೆಸಿ, ಪಡಿತರವನ್ನು ಆ ಭಾಗದಲ್ಲೇ ವಿತರಿಸುವಂತೆ ವಿನಂತಿಸಿಕೊಂಡಿದ್ದರು.

ಯುವಕರ ಮನವಿಗೆ ಸ್ಪಂದಿಸಿದ ಸೊಸೈಟಿಯ ಅಧ್ಯಕ್ಷ ವಸಂತ ಮಜಲು ಹಾಗೂ ಆಡಳಿತ ಮಂಡಳಿಯವರು ಬುಧವಾರ ಮಾವಿನಕಟ್ಟೆ ಪ್ರದೇಶದಲ್ಲಿರುವ 35 ಮನೆಗಳಿಗೆ ಪಡಿತರವನ್ನು ತಲುಪಿಸಿದ್ದಾರೆ.

ಪಡಿತರವನ್ನು ವಿತರಿಸುವಲ್ಲಿ ಸೊಸೈಟಿಯ ಆಡಳಿತ ಮಂಡಳಿ, ಸಿಬ್ಬಂದಿಗಳು, ಪಂಚಾಯಿತಿ ಆಡಳಿತ ಹಾಗೂ ಸದಸ್ಯರು, ಸಿಬ್ಬಂದಿಗಳು ಹಾಗೂ ಸ್ಥಳೀಯ ಬಿಜೆಪಿ ಪ್ರಮುಖರು ಪಡಿತರ ಸಾಗಾಟಕ್ಕೆ ಸಹಕರಿಸಿದರು.

ಪಡಿತರ ವಿತರಣೆ ಸಂದರ್ಭ ಕಳಿಯ ಪ್ರಾ. ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ ಕಲ್ಲಾಪು, ಸದಸ್ಯರಾದ ಶೇಖರ ನಾಯ್ಕ್ , ರತ್ನಾಕರ ಪೂಜಾರಿ ಬಳ್ಳಿದಡ್ಡ, ಸಿಇಒ ಸತ್ಯಶಂಕರ ಭಟ್, ಉಪನ್ಯಾಸಕ ಕೇಶವ ಬಂಗೇರ, ಸಾಮಾಜಿಕ ಕಾರ್ಯಕರ್ತ, ಬಿಜೆಪಿ ಮುಂದಾಳು ಕರುಣಾಕರ ಕೊರಂಜ, ಕಳಿಯ ಗ್ರಾ.ಪಂ. ಸದಸ್ಯರಾದ ಸುಧಾಕರ ಮಜಲು, ವಿಜಯ ಗೌಡ ಕೆ., ಬಿಜೆಪಿಯ ಪ್ರಮುಖರಾದ ಸೋಮಪ್ಪ ಗೌಡ, ದಿನೇಶ್ ಪೂಜಾರಿ ಗೋವಿಂದೂರು, ಕೃಷಿಕ ಪವನ್ ಕುಮಾರ್ ಸಿ.ಎ. ಬ್ಯಾಂಕಿನ ಪಡಿತರ ವಿತರಕ ಸಿಬ್ಬಂದಿಗಳಾದ ಕೇಶವ ಶೆಟ್ಟಿ ಹಾಗೂ ನವೀನ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕುಂಞಿ ಕೆ, ಸಿಬ್ಬಂದಿಗಳಾದ ರವಿ ಎಚ್., ಸುರೇಶ್ ಸ್ಥಳೀಯರಾದ ರಾಜೇಶ್, ಅವಿನಾಶ್ ಮತ್ತಿತ್ತರರು ಸಹಕರಿಸಿದರು.

error: Content is protected !!