‘ಬಯೋ‌ ಬಬಲ್’ ಏರಿಯಾಗೂ ಕೊರೋನಾ ಕಾಟ: ಆರ್.ಸಿ.ಬಿ., ಕೆ.ಕೆ.ಆರ್. ಪಂದ್ಯಾಟ ಮುಂದೂಡಿಕೆ: ಕೆ.ಕೆ.ಆರ್. ತಂಡದ ಇಬ್ಬರಿಗೆ ಕೊರೋನಾ ಪಾಸಿಟಿವ್: ಕೆ.ಕೆ.ಆರ್.ನ ವರುಣ್ ಚಕ್ರವರ್ತಿ ಹಾಗೂ‌ ಸಂದೀಪ್ ವಾರಿಯರ್ ಕೊರೋನಾ ಪಾಸಿಟಿವ್: ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಆರ್.ಸಿ.ಬಿ.: ಐಪಿಎಲ್ ಪಂದ್ಯಾವಳಿಗೂ ಕೊರೋನಾ ಭೀತಿ

ಹೈದರಾಬಾದ್: ‘ಬಯೋ‌ ಬಬಲ್’ ಏರಿಯಾ ಸೃಷ್ಟಿಸಿಕೊಂಡು ನಡೆಯುತ್ತಿದ್ದ ಐಪಿಎಲ್ ಪಂದ್ಯಾವಳಿಗೂ ಕೊರೋನಾ ಕಾಟ‌ ಎದುರಾಗಿದೆ. ಕೆ.ಕೆ.ಆರ್. ತಂಡದ ಇಬ್ಬರು ಕೊರೋನಾ ಪಾಸಿಟಿವ್ ರಿಪೋರ್ಟ್ ಪಡೆದಿದ್ದಾರೆ ಎನ್ನಲಾಗಿದ್ದು, ಮೇ 3 ಸೋಮವಾರ ನಡೆಯಬೇಕಿದ್ದ ಕೆ.ಕೆ.ಆರ್. ಹಾಗೂ ಆರ್.ಸಿ.ಬಿ. ನಡುವಿನ ಹಣಾಹಣಿ ಮುಂದೂಡಲಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರಿಗೆ ಕೊರೋನಾ ಪಾಸಿಟಿವ್ ಆಗಿದ್ದು ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಆರ್.ಸಿ.ಬಿ. ತನ್ನ ಸೋಶಿಯಲ್ ಮೀಡಿಯಾ ಅಕೌಂಟ್ ಮೂಲಕ ಹಾರೈಸಿದೆ. ಸದ್ಯ ಕೆ.ಕೆ.ಆರ್. ತಂಡದ ಆಟಗಾರರು ಹಾಗೂ ಸಿಬ್ಬಂದಿ ಹೋಟೆಲ್ ನಲ್ಲಿ ಐಸೋಲೇಶನ್ ಗೆ ಒಳಗಾಗಿದ್ದಾರೆ.

ಸುರಕ್ಷಿತ ವಲಯದಲ್ಲಿ ಪ್ರೇಕ್ಷಕರಿಲ್ಲದೆ ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿದ್ದವು. ಇದೀಗ ಇಬ್ಬರು ಆಟಗಾರರಿಗೆ ಪಾಸಿಟಿವ್ ಎನ್ನುವ ವಿಚಾರ ಸಂಚಲನ ಸೃಷ್ಟಿಸುವ ಜೊತೆಗೆ ಐಪಿಎಲ್ ಪಂದ್ಯಾವಳಿಗಳಿಗೂ ಕೊರೋನಾ ಬ್ರೇಕ್ ಹಾಕಿಸುವುದೇ ಎಂಬ ಅನುಮಾನ ಮೂಡಿಸಿದೆ.

error: Content is protected !!