ಅಕ್ರಮ ಮದ್ಯ ಸಾಗಾಟ: ಕಾರು ಸಹಿತ 34,560 ರೂ ಮೌಲ್ಯದ ಮದ್ಯ ವಶಪಡಿಸಿಕೊಂಡ ಅಬಕಾರಿ ಪೊಲೀಸರು

ಬೆಳ್ತಂಗಡಿ: ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆಳ್ತಂಗಡಿ ಅಬಕಾರಿ ಇಲಾಖೆ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.

ಇವತ್ತು ಬೆಳಿಗ್ಗೆ ನಿಡ್ಲೆ ಗ್ರಾಮದ ಕುದ್ರಾಯ ಸಮೀಪ ರಸ್ತೆಯಲ್ಲಿ ವಾಹನ ತಪಾಸಣೆ ಸಮಯದಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾಗುತ್ತಿದ್ಧ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸುತಿದ್ದಾಗ ಅಕ್ರಮವಾಗಿ 34,560ಲೀಟರ್ ಮದ್ಯವನ್ನು ಮಾರಾಟದ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ

ಈ ಸಮಯದಲ್ಲಿ ಆರೋಪಿ ಅಭಿಲಾಶ್, ಬಿನ್ ಅಬ್ರಹಂ, ಶಿಬಾಜೆ ಇವರು ಪರಾರಿಯಾಗಿರುತ್ತಾರೆ.

ವಾಹನದ ಮಾಲೀಕರ ಮಾಹಿತಿಯನ್ನು ಪತ್ತೆಹಚ್ಚಲಾಗುತ್ತಿದೆ.

ಟೊಯೋಟಾ ಕಂಪನಿಯ ಕ್ವಾಲಿಸ್ ವಾಹನ ಹಾಗೂ 34.560ಲೀಟರ್ ಮದ್ಯ ಸಹಿತ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 5,00,000/- ಆಗಿದೆ.

ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್ ಈ ಬಗ್ಗೆ ಮೊಕದ್ದಮೆ ದಾಖಲು ಮಾಡಿದ್ದಾರೆ.

ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಬಿಂದು ಶ್ರೀ.ಪಿ ರವರ ನಿರ್ದೇಶನದ ಮೇರೆಗೆ ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶ್ರೀಮತಿ ಶೋಭಾ.ಕೆ ರವರ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ವಲಯ ಕಚೇರಿಯ ಅಬಕಾರಿ ಮುಖ್ಯ ಪೇದೆ ಸಯ್ಯದ್ ಶಬೀರ್,  ಅಬಕಾರಿ ಪೇದೆ ಭೋಜ.ಕೆ, ಶ್ರೀ ಶಿವಶಂಕರಪ್ಪ, ಶ್ರೀ ರವಿಚಂದ್ರ ಬೂದಿಹಾಳ ಮತ್ತು ವಾಹನ ಚಾಲಕ ನವೀನ್ ಕುಮಾರ್.ಪಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!