ರಾಜ್ಯ ಹೆದ್ದಾರಿ ಅಗಲೀಕರಣ ಎ15 ಮತ್ತು 17 ರಂದು ವಿದ್ಯುತ್ ವ್ಯತ್ಯಯ

ಬೆಳ್ತಂಗಡಿ: ವೇಣೂರು – ಮೂಡಬಿದ್ರೆ ರಾಜ್ಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ವಿದ್ಯುತ್ ಲೈನುಗಳನ್ನು ಸ್ಥಳಾಂತರಿಸಲಿರುವ ಹಿನ್ನೆಲೆಯಲ್ಲಿ ಎಪ್ರಿಲ್ 15 ಗುರುವಾರ ಹಾಗೂ ಎಪ್ರಿಲ್ 17 ಶನಿವಾರದಂದು 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ವೇಣೂರು ಹಾಗೂ ಆರಂಬೋಡಿ ಫೀಡರುಗಳಲ್ಲಿ ಮತ್ತು 33 /11 ಕೆವಿ ವೇಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಅದೇ ರೀತಿ ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಎಪ್ರಿಲ್ 15 ಗುರುವಾರದಂದು 33/11 ಕೆವಿ ಕಕ್ಕಿಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

error: Content is protected !!