ಬಡಕೋಡಿ, ಕಾಶಿಪಟ್ನ ಭಾರೀ ಗಾಳಿ ಮಳೆಗೆ ಅಪಾರ ಹಾನಿ

ಬೆಳ್ತಂಗಡಿ :ತಾಲೂಕಿನ ಬಡಕೋಡಿ ಮತ್ತು ಕಾಶಿಪಟ್ಣ ಗ್ರಾಮಗಳಲ್ಲಿ ಸುಂಟರಗಾಳಿ,ಸಿಡಿಲು ಮತ್ತು ಮಳೆಯಿಂದ ಅಪಾರ ಹಾನಿಯಾದ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಸುರಿದ ಮಳೆ ಹಾಗೂ ಸುಂಟರ ಗಾಳಿಗೆ ಬಡಕೋಡಿ ಗ್ರಾಮದ ನಡ್ತಿಕಲ್ ಎಂಬಲ್ಲಿ ಪ.ಪ ಕಾಲೋನಿಯ ಶ್ರೀಮತಿ ರತ್ನ ನಾಯ್ಕ್,ಮನೆಯ ಹಂಚು, ಶೀಟ್ ಗಾಳಿಯ ಹೊಡೆತಕ್ಕೆ ಸಿಕ್ಕಿ ಕೆಳಗಡೆ ಹಾರಿ ಬಿದ್ದಿದೆ ಆಶಾ ನಾಯ್ಕ್ ರ ಮನೆಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದ್ದು ಕಮಲ ನಾಯ್ಕ್ ಮನೆಯ ಸಿಮೆಂಟ್ ಶೀಟು,ಅಡಿಕೆ ಮತ್ತು ಮರಗಳು, ಐತು ಶೆಟ್ಟಿಯರ ಅಡಿಕೆ ಮರಗಳು, ದೇವಕಿಯರ ಮನೆಯ ಸಿಮೆಂಟ್ ಶೀಟ್,ರಘುನಾಥ್ ನಾಯ್ಕ್ ಕೊಟ್ಟಿಗೆ,ಜಾನಕಿ ಮತ್ತು ಸುಧೀಶ್ ಪೂಜಾರಿ ಮನೆಯ ಶೀಟ್, ಶುಭಾನಂದ ಪೂಜಾರಿ ಕಾಜೊಟ್ಟುರವರ 100 ಅಡಿಕೆ ಮತ್ತು ಶ್ರೀಪತಿ ಉಪಾಧ್ಯಾಯರವರ 50 ಅಡಿಕೆ ಧರೆಗೆ ಉರುಳಿ ಬಿದಿದ್ದು ಹಲವು ಮನೆಗಳ ಶೀಟ್,ಹಂಚು,ಅಡಿಕೆ ಮರ ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದು ಅಪಾರ ಆಸ್ತಿ ನಷ್ಟವಾಗಿದೆ.

ವಿಷಯ ತಿಳಿದ ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಧರಣೇಂದ್ರ ಕುಮಾರ್ ರವರು ಮಿತ್ರರರೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ರಸ್ತೆಗಳಿಗೆ ಬಿದ್ದ ಮರಗಳನ್ನು ಹಾಗು ವಿದ್ಯುತ್ ಕಂಬಗಳನ್ನು ಜೆಸಿಬಿ ತರಿಸಿ ತೆರವು ಮಾಡಿಸಿ ರಸ್ತೆಗಳನ್ನು ವಾಹನ ಸಂಚಾರಕ್ಕೆ ಅನುವು‌ ಮಾಡಿಕೊಟ್ಟರಲ್ಲದೆ ತಹಶೀಲ್ದಾರ್ ಹಾಗೂ ಎಸಿಯವರಿಗೆ ಮಾಹಿತಿ ತಿಳಿಸಿ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು

ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಸದಸ್ಯ ಶ್ರೀಪತಿ ಉಪಾಧ್ಯಾಯ, ಸ್ಥಳಿಯರಾದ ವಾಸುದೇವ ನಾಯ್ಕ್, ರಾಘವೆಂದ್ರ ನಾಯ್ಕ್ ಸೇರಿದಂತೆ ಊರವರು ಸಹಕರಿಸಿದ್ದರು.

error: Content is protected !!