ಧರ್ಮಸ್ಥಳ: ಕರ್ನಾಟಕದಾದ್ಯಂತ ಇರುವ ಎಲ್ಲಾ ರುಡ್‌ಸೆಟ್ ಸಂಸ್ಥೆಗಳ 2020-21ರ ಸಾಲಿನ ವಾರ್ಷಿಕ ವರದಿಯನ್ನು ಧರ್ಮಸ್ಥಳದಲ್ಲಿ ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಡಾ. ಹೆಗ್ಗಡೆಯವರು ಎಲ್ಲಾ ಸಂಸ್ಥೆಗಳ ನಿರ್ದೇಶಕರುಗಳೊಂದಿಗೆ ವಿಮರ್ಶೆ ಸಭೆಯನ್ನು ನಡೆಸಿ ಒಂದು ವರ್ಷದ ಕಾರ‍್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
2020-21ರ ವಾರ್ಷಿಕ ಗುರಿಯನ್ನು ತಲುಪುವಲ್ಲಿ ಸಂಸ್ಥೆಯ ಕಾರ‍್ಯ ವೈಖರಿಯನ್ನು ಶ್ಲಾಘಿಸಿ, ಮುಂದಿನ ವರ್ಷಗಳಲ್ಲೂ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ತಿಳಿಸಿ, ಮಹಿಳೆಯರಿಗೆ, ವಿಕಲ ಚೇತನರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹೊಸ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದರು.
ರುಡ್‌ಸೆಟ್ ಸಂಸ್ಥೆ ಉಜಿರೆ ಕೇಂದ್ರ ಕಛೇರಿಯ ಪ್ರಭಾರ ಕಾರ್ಯನಿರ್ವಾಹಕ ನಿರ್ದೆಶಕ ಪಡದಯ್ಯ ಸಿ. ಹಿರೇಮಠ್ ಹಾಗೂ ಬ್ರಹ್ಮಾವರ, ಚಿತ್ರದುರ್ಗ, ಮೈಸೂರು, ಬೆಂಗಳೂರು, ವಿಜಯಪುರ ಮತ್ತು ಧಾರವಾಡದ ರುಡ್‌ಸೆಟ್ ಸಂಸ್ಥೆಗಳ ನಿರ್ದೆಶಕರುಗಳು ಉಪಸ್ಥಿತರಿದ್ದರು.