ಬೆಳ್ತಂಗಡಿ: ದೇಶದ ಭದ್ರತೆ ಮತ್ತು ಏಕತೆಗೆ ಬಹು ದೊಡ್ಡ ಕಂಟಕವಾಗಿರುವ ಕಮ್ಯುನಿಸ್ಟ್ ಪ್ರೇರಿತ ನಕ್ಸಲ್ ಸಂಘಟನೆಗಳು ಸೈನಿಕರ ಮೇಲೆ ನಡೆಸಿದ ಬೀಕರ ಧಾಳಿಯನ್ನು ಖಂಡಿಸುತ್ತೇನೆ ಮತ್ತು ಸೈನಿಕರ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗವುದಿಲ್ಲ ಎನ್ನುವ ನಂಬಿಕಯಿದೆ.ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು ಅವರು ಇಂದು ಬೆಳ್ತಂಗಡಿ ಬಿಜೆಪಿ ಮಂಡಲ ಯುವಮೋರ್ಚಾ ವತಿಯಿಂದ ಮೂರು ಮಾರ್ಗದ ಬಳಿ ನಕ್ಸಲರ ದಾಳಿಗೆ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಕಾಡಿನಲ್ಲಿರುವ ನಕ್ಸಲರು ಮತ್ತು ಅವರಿಗೆ ಬೆಂಗಾವಲಾಗಿರುವ ನಗರವಾಸಿ ನಕ್ಸಲರ ಮೂಲೋತ್ಪಟನೆಗೆ ಈ ದುಷ್ಕೃತ್ಯ ನಾಂದಿಯಾಗಲಿದೆ, ಇಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರು ಸೈನಿಕರ ಶಿಬಿರಕ್ಕೆ ಭೇಟಿ ನೀಡಿ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸಿದ್ದಾರೆ ಮತ್ತು ನಕ್ಸಲ್ ಸಂಘಟನೆಗಳ ವಿರುದ್ದ ಕಠಿಣ ಪ್ರತೀಕಾರದ ಭರವಸೆಯನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ನೆರವೇರಿಸಿ ಮೊಂಬತ್ತಿ ಬೆಳಗಿಸಿ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ನ.ಪಂ ಅಧ್ಯಕ್ಷೆ ರಜನಿ ಕುಡ್ವ,ಬಿಜೆಪಿ ಮಂಡಲ ಉಪಾಧ್ಯಕ್ಷ ಪ್ರಶಾಂತ್ ಪಾರೆಂಕಿ, ಮಚ್ಚಿನ ಗ್ರಾ ಪಂ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಭಾಸ್ಕರ ಧರ್ಮಸ್ಥಳ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಯತೀಶ್ ಶೆಟ್ಟಿ,ಬೆಳ್ತಂಗಡಿ ಮಂಡಲ ಯುವ ಮೊರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ,ಕಾರ್ಯದರ್ಶಿ ಉಮೇಶ್ ಕುಲಾಲ್, ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಲಾಯಿಲ, ಗ್ರಾ.ಪಂ ಸದಸ್ಯ ಅರವಿಂದ ಲಾಯಿಲ, ನ.ಪಂ ಸದಸ್ಯ ಶರತ್ ಶೆಟ್ಟಿ, ಕುವೆಟ್ಟು ಗ್ರಾ.ಪಂ ಸದಸ್ಯ ನಿತೇಶ್ , ಮೇಲಂತಬೆಟ್ಟು ಗ್ರಾ.ಪಂ ಸದಸ್ಯ ಚಂದ್ರರಾಜ್, ವಕೀಲ ವಸಂತ ಮರಕಡ, ಹಾಗೂ ಇನ್ನಿತರ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.