ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಆರೋಗ್ಯವಂತರಾಗಿರಲು ಸಾಧ್ಯ, ಪದ್ಮವಿಭೂಷಣ ಡಾ. ಬಿ. ಯಂ. ಹೆಗ್ಡೆ

ಬೆಳ್ತಂಗಡಿ: ದೇಹದ ಎಲ್ಲಾ ಪ್ರಕ್ರಿಯೆಗಳಿಗೆ‌ ಮನಸ್ಸು ಕಾರಣ ಅದ್ದರಿಂದ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ಪದ್ಮವಿಭೂಷಣ ಪ್ರಶಸ್ತಿ ವಿಜೇತ ಡಾ. ಬಿ.ಯಂ. ಹೆಗ್ಡೆ ತಿಳಿಸಿದರು.

ಅವರು ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಬಂಟರ ಕೂಟ ಜಸ್ಟಿಸ್ ಕೆ .ಎಸ್ . ಹೆಗ್ಡೆ ವೇದಿಕೆ ವತಿಯಿಂದ ಲಾಯ್ಲ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಎ 04 ರಂದು ನಡೆದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮನಸ್ಸು ಎಲ್ಲಿದೆ ಗೊತ್ತಿಲ್ಲ ಅದರೆ ಅದು ಬಹಳ ಶಕ್ತಿಶಾಲಿಯಾಗಿದೆ ಡಾಕ್ಟರ್ ಗಳಿಗೆ ರೋಗಿಗಳು ಅಗತ್ಯ ಹೊರತು ರೋಗಿಗಳಿಗೆ ಡಾಕ್ಟರ್ ಅವಶ್ಯಕವಾಗಿರುವುದಿಲ್ಲ ಅದ್ದರಿಂದ ಡಾಕ್ಟರ್ ಗಳು ಬರುವಂತಹ ರೋಗಿಗಳನ್ನು ಒಳ್ಳೆಯ ಮನಸ್ಸಿನಿಂದ ಚಿಕಿತ್ಸೆ ನೀಡಬೇಕು. ಹೊಟ್ಟೆಕಿಚ್ಚು ಎಂಬುವುದು ದೊಡ್ಡ ವಿಷ ಇದು ಕೂಡ ಒಂದು ಮಾರಕ ರೋಗ ಇದ್ದಂತೆ ಇದೂ ಕೂಡ ನಮ್ಮನ್ನು ಬೆಂಕಿ ತರ ನಮ್ಮನ್ನೆ ಸುಡುತ್ತದೆ ಅದ್ದರಿಂದ ಯಾರ ಮೇಲೂ ಹೊಟ್ಟೆಕಿಚ್ಚು ಪಡದೇ ಅವರ ಸಂತೋಷವನ್ನು ನೋಡಿ ನಾವೂ ಸಂತೋಷ ಪಡಬೇಕು ಅಳಿಲಿನಂತಹ ಬುದ್ಧಿ ಇಲ್ಲದ ಚಿಕ್ಕ ಪ್ರಾಣಿಗೂ ಸೇವಾ ಮನೋಭಾವ ಇರುತ್ತದೆ ಅದರೆ ಬುದ್ಧಿ ಇರುವ ಮನುಷ್ಯ ಮಾತ್ರ ಇನ್ನೊಬ್ಬರಿಗೆ ಕೆಡುಕನ್ನು ಬಯಸುವುದರಲ್ಲೆ ತನ್ನ ಜೀವನವನ್ನು ಕಳೆಯುತ್ತಾನೆ ಅದ್ದರಿಂದ ಇನ್ನೊಬ್ಬರಿಗೆ ಕೆಡುಕು ಬಯಸದೇ ಮನುಷ್ಯರಂತೆ ಬದುಕಲು ನಾವು ಮೊದಲು ಕಲಿಯಬೇಕು ಎಂದರು.

ಡಾ.ಮೋಹನ್ ಆಳ್ವ ಅಭಿನಂದನಾ ಭಾಷಣ ಮಾಡಿ ಜೀವನವನ್ನು ಯಾವ ರೀತಿ ಮೌಲ್ಯಾಧಾರಿತ ವಾಗಿ ಇಟ್ಟುಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದ ಎರಡು ಶ್ರೇಷ್ಟ ವ್ಯಕ್ತಿಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ಬಿ. ಯಂ. ಹೆಗ್ಡೆ ಇವರುಗಳನ್ನು ಯಾವಾಗಲೂ ನಾನು ಪೂಜನೀಯ ಹಾಗೂ ಗುರು ಸ್ಥಾನದಲ್ಲಿ ನೋಡುತ್ತೇನೆ .ಬಿ.ಯಂ ಹೆಗ್ಡೆಯವರು 40 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣದ ಪ್ರಾಧ್ಯಾಪಕರಾಗಿ ಸಾವಿರಾರು ವೈಧ್ಯರನ್ನು ಸಮಾಜಕ್ಕೆ ನೀಡಿ ಲಂಡನ್, ನಾರ್ತ್ ಕೆರೋಲಿಯನ್ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಅತ್ಯುತ್ತಮ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಹಲವು ಭಾಷೆಗಳನ್ನು ಸ್ಪಷ್ಟವಾಗಿ ಮಾತನಾಡುವ ಇವರು ಕೊಂಕಣಿ ವಿಶ್ವ ಸಮ್ಮೇಳನದ ಉದ್ಘಾಟನಾ ಭಾಷಣವನ್ನು ಕೊಂಕಣಿಯಲ್ಲೇ ಮಾಡಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದ್ದಾರೆ. ತನ್ನ ಹತ್ತಿರ ಬರುವವರಲ್ಲಿ ಅವರ ಭಾಷೆಯಲ್ಲೇ ಮಾತನಾಡಿ ಅವರ ಮನಸ್ಸಿಗೆ ಹತ್ತಿರ ಆಗುವಂತಹ ದೊಡ್ಡ ವ್ಯಕ್ತಿ ಇವರ ಲೇಖನವನ್ನು ಓದಿದ ಗುಜರಾತಿನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಇವರನ್ನು ಆಹ್ವಾನಿಸಿ ಗುಜರಾತಿನ ಆರೋಗ್ಯ ಇಲಾಖೆಯ ಸಲಹೆಗಾರರಾಗಬೇಕು ಎಂದು ವಿನಂತಿ ಮಾಡಿಕೊಂಡಿದ್ದರು ಈಗಲೂ ಪ್ರಧಾನಿ ಮೋದಿಯವರಲ್ಲಿ ಅತೀ ಸಲುಗೆಯಲ್ಲಿ ಮಾತನಾಡುತ್ತ ಆತ್ಮೀಯತೆಯಿಂದ ಇರುವ ಸರಳ ವ್ಯಕ್ತಿ ಡಾ.ಬಿ .ಯಂ ಹೆಗ್ಡೆ ಯವರು ಇನ್ನೊಬ್ಬರನ್ನು ನೋಡಿ ನಗುವುದಲ್ಲ ಅವರ ಒಟ್ಟಿಗೆ ಸೇರಿ ನಗಬೇಕು ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಇವರು ಇಡೀ ಸಮಾಜಕ್ಕೆ ಮಾದರಿ ಎಂದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೀತಾರಾಮ ರೈ ಮಾತನಾಡಿ ತನ್ನ ಇತಿಮಿತಿಯೊಳಗೆ ಒಳ್ಳೆಯ ಕೆಲಸಗಳನ್ನು ಮಾಡಿ ಸಮಾಜಕ್ಕೆ ತನ್ನಿಂದಾದ ಕೊಡುಗೆಗಳನ್ನು ನೀಡಿದಾಗ ಸಮಾಜ ಅದನ್ನು ಗುರುತಿಸಿ ಗೌರವಿಸಿದಾಗ ಆತ ಸಾಧಕನಾಗುತ್ತಾನೆ.ಇವತ್ತು ಪದ್ಮವಿಭೂಣ ಪ್ರಶಸ್ತಿ ಪಡೆದ ದೊಡ್ಡ ಸಾಧಕನನ್ನು ಅಭಿನಂದಿಸುವ ಗೌರವಾನ್ವಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಸಂತೋಷವಾಗುತ್ತಿದೆ.ಇವತ್ತು ಡಾ.ಬಿ ಯಂ ಹೆಗ್ಡೆಯವರಿಗೆ ಅಭಿನಂದನೆ,ಮೃಗಯಾ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಸಂಸ್ಮರಣೆ ಹಾಗೂ ಜಸ್ಟಿಸ್ ಕೆ.ಎಸ್. ಹೆಗ್ಡೆ ನೆನಪುಗಳು ಎಂಬ ಕಾರ್ಯಕ್ರಮಗಳು ಅವಿಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ನಾಲ್ಕು‌ ಮಂದಿ ಮಹಾಮಾತೆಯರಾದ ಶ್ರೀಮತಿ ನಳಿನಿ ಮುತ್ತಣ್ಣ ಪೂಂಜ ಗರ್ಡಾಡಿ, ಶ್ರೀಮತಿ ಕಾಶಿ ಶೆಟ್ಟಿ, ನವಶಕ್ತಿ ಗುರುವಾಯನಕೆರೆ, ಶ್ರೀಮತಿ ಜಯಂತಿ ಚಂದ್ರು ಶೆಟ್ಟಿ ಕೋಡಿಯೇಲು, ಶ್ರೀಮತಿ ಸುನೀತ ರಾಧಕೃಷ್ಣ ರೈ, ಶಕ್ತಿನಗರ,ಗುರುವಾಯನಕೆರೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ವಿಜೇತರಾದ ಸ್ವಜಾತಿ ಸದಸ್ಯರಿಗೆ, ಬಂಟರ ಮಹಿಳಾ ಸಂಘದ ಸಾಧಕಿಯರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.

ಮೃಗಯಾ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಸಂಸ್ಮರಣೆಯನ್ನು ಡಾ.ಕೆ.ಟಿ. ರೈ ವಿಟ್ಲ ಮಾಡಿದರು. ಸೂರಜ್ ಬಿ. ಶೆಟ್ಟಿಯವರು ಜಸ್ಟಿಸ್ ಕೆ.ಎಸ್. ಹೆಗ್ಡೆ ನೆನಪುಗಳು ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ವಹಿಸಿದ್ದರು. ನೀತಾ ಹರೀಶ್ ಅಭಿನಂದನಾ ಪತ್ರ ವಾಚಿಸಿದರು.ವೇದಿಕೆಯಲ್ಲಿ ಕುಸುಮಾ ,ವಿ. ಶೆಟ್ಟಿ ನಾರಾಯಣ ಶೆಟ್ಟಿ, ಆನಂದ ಶೆಟ್ಟಿ, ಉಪಸ್ಥಿತರಿದ್ದರು.ಬಿ. ವಿಠಲ ಶೆಟ್ಟಿ ಶ್ರದ್ಧಾ ಲಾಯಿಲ ಸ್ವಾಗತಿಸಿದರು.ಕವಿತಾ ಶೆಟ್ಟಿ ನಿರ್ವಹಿಸಿ ವಂದಿಸಿದರು..

error: Content is protected !!