ವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಹೊಂದಿ ವರ್ಗಾವಣೆಯಾದ ವಿನೋದ್ ಗೌಡ

ಬೆಳ್ತಂಗಡಿ: ಉಜಿರೆ ಉಪವಲಯ ಅರಣ್ಯಾಧಿಕಾರಿಯಾಗಿದ್ದ ವಿನೋದ್ ಗೌಡ ಅವರು ವಲಯ ಅರಣ್ಯಾಧಿಕಾರಿಯಾಗಿ (ಆರ್‌ಎಫ್‌ಒ) ಪದೋನ್ನತಿಹೊಂದಿ ಮೈಸೂರು ಪಿರಿಯಾಪಟ್ಟಣಕ್ಕೆ ವರ್ಗಾವಣೆಗೊಂಡಿದ್ದಾರೆ.

ಮೂಲತಃ ಮೈಸೂರಿನವರಾಗಿರುವ ಅವರು ಉಪವಲಯ ಅರಣ್ಯಾಧಿಕಾರಿಯಾಗಿ ಅರಣ್ಯ ಇಲಾಖೆಗೆ ಸೇರ್ಪಡೆಗೊಂಡು 14 ವರ್ಷ ಮೈಸೂರಿನಲ್ಲಿ, 8 ವರ್ಷ ನಾಗರಹೊಳೆಯಲ್ಲಿ, ಮೂರೂವರೆ ವರ್ಷ ಅರಣ್ಯ ಸಂಚಾರಿ ದಳದಲ್ಲಿ ಹಾಗೂ ಉಜಿರೆಯಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಇದೀಗ ಆರ್‌ಎಫ್‌ಒ‌ ಆಗಿ ಪದೋನ್ನತಿಗೊಂಡಿದ್ದಾರೆ.

ಇಲಾಖೆಯ ಕರ್ತವ್ಯದ ಅವಧಿಯಲ್ಲಿ ಅವರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅರಣ್ಯ ಕಾಯ್ದೆ ಪ್ರಕರಣಗಳ ಯಶಸ್ವಿ ಪತ್ತೆ ಕಾರ್ಯದಲ್ಲಿ ಭಾಗಿಯಾದುದಕ್ಕಾಗಿ ರಾಜ್ಯಪಾಲ ವಜೂಭಾಯ್ ವಾಲಾರಿಂದ ಪ್ರಶಸ್ತಿಯನ್ನೂ ಪಡೆದಿದ್ದಾರೆ.

error: Content is protected !!