ಗೊಡಂಬಿ ಬೀಜ ಗಂಟಲಲ್ಲಿ ಸಿಲುಕಿ ಮೂರುವರೆ ವರ್ಷದ ಕಂದಮ್ಮ ಮೃತ್ಯು

ಪುತ್ತೂರು: ಗೋಡಂಬಿ ಬೀಜ ಗಂಟಲಿನಲ್ಲಿ ಸಿಲುಕಿ ಮೂರುವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ‌ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಸಾಲ್ಮರ ಉರುಮಾಲ್ ಇಸಾಕ್ ಎಂಬವರ ಮೂರುವರೆ ವರುಷದ ಗಂಡು ಮಗು ಗೋಡಂಬಿ ಬೀಜ ತಿನ್ನುತ್ತಿರುವ ಸಂದರ್ಭ, ಅದು ಗಂಟಲಲ್ಲಿ ಸಿಲುಕಿ ಮಗು ಆಸ್ವಸ್ಥಗೊಂಡಿತ್ತು. ಇದನ್ನು ಗಮನಿಸಿದ ಮನೆಯವರು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋದರು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಮಗು ಸಾವನ್ನಪ್ಪಿದೆ.
ಮಕ್ಕಳ ಬಗ್ಗೆ ಇರಲಿ‌ ಎಚ್ಚರ:
ಪೋಷಕರು ಗಮನಿಸದೆ ಅಚಾತುರ್ಯದಿಂದ ಚಿಕ್ಕ ಮಕ್ಕಳು ಅಸುನೀಗುವ ಸಂಖ್ಯೆ ಅಧಿಕವಾಗತೊಡಗಿದೆ. ಅದ್ದರಿಂದ ಪೋಷಕರು ದಯವಿಟ್ಟು ಮಕ್ಕಳ ಚಟುವಟಿಕೆಗಳು, ಆಹಾರ ಸೇವಿಸುವ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸಬೇಕಿದೆ. ಮಕ್ಕಳ ಕೈಗೆ ಅಪಾಯಕಾರಿ ಆಟಿಕೆಗಳು, ತಿನ್ನಲು ಗಾತ್ರದಲ್ಲಿ ದೊಡ್ಡದಿರುವ, ಘನ ರೂಪದಲ್ಲಿರುವ ತಿಂಡಿ, ತಿನಿಸುಗಳನ್ನು ನೀಡುವ ಸಂದರ್ಭದಲ್ಲಿ ಎಚ್ಚರ ವಹಿಸಿ, ಸಂಭಾವ್ಯ ಅಪಾಯಗಳನ್ನು ‌ತಪ್ಪಿಸುವ ಜೊತೆಗೆ ‌ಅಮೂಲ್ಯ‌ ಜೀವಗಳನ್ನು ಕಾಪಾಡಬಹುದು ಎನ್ನುವುದು ‘ಪ್ರಜಾಪ್ರಕಾಶ ನ್ಯೂಸ್’ ತಂಡದ‌ ಆಶಯವಾಗಿದೆ.

error: Content is protected !!