ಉಜಿರೆ ಹುಡುಗಿಯೊಂದಿಗೆ ಅಸಭ್ಯ ವರ್ತನೆ ಯುವಕನ ಮೇಲೆ ಕೇಸ್ ದಾಖಲು

ಬೆಳ್ತಂಗಡಿ: ಯುವಕನೋರ್ವ ಅಪ್ರಾಪ್ತ ಯುವತಿಯೋರ್ವಳ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಬುಧವಾರ ಕಲ್ಮಂಜ ಗ್ರಾಮದ ನಿಡಿಗಲ್ ಸಮೀಪ ನಡೆದಿದೆ.

10ನೇ ತರಗತಿ ಓದುತ್ತಿದ್ದ ಯುವತಿ ಬುಧವಾರ ದಿಡುಪೆಯಿಂದ ಧರ್ಮಸ್ಥಳ ಸಮೀಪದ ತನ್ನ ಅಜ್ಜಿಮನೆಗೆ ಬಸ್ಸಿನಲ್ಲಿ ಸಂಜೆ 4 ಗಂಟೆ ತೆರಳುತ್ತಿದ್ದಾಗ ಅದೇ ಬಸ್ಸಿನಲ್ಲಿದ್ದ ಆರೋಪಿ ಮಹಮ್ಮದ್ ಇರ್ಫಾನ್ ಎಂಬಾತ ಆಕೆಯ ಹತ್ತಿರ ಕುಳಿತು ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದಾಗ ಬಾಲಕಿ ಬೊಬ್ಬೆ ಹಾಕಿ ವಿರೋಧಿಸಿದ್ದಾಳೆ. ಇದನ್ನು ಗಮನಿಸಿದ ಬಸ್ ಚಾಲಕ ಬಸ್ ನಿಲ್ಲಿಸಿದಾಗ ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಈ ಸಂದರ್ಭ ಅಲ್ಲೇ ಇದ್ದ ಸಾರ್ವಜನಿಕರು ತಕ್ಷಣ ಅವನನ್ನು ಹಿಡಿದು ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!