ಬೆಳ್ತಂಗಡಿ:ಕಾಲು ಕಳೆದು ಕೊಂಡಿದ್ದರೂ ಕಲಾವಿದನಾಗಿ ಮಿಂಚುತ್ತಿರುವ ಯಕ್ಷಗಾನ ಪ್ರತಿಭೆ ಮನೋಜ್ ವೇಣೂರು ಅವರ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮಾ 30 ರಂದು ನಡೆಯಿತು. ಕೊಡುಗೈ ದಾನಿ ಉದ್ಯಮಿ ಶಶಿಧರ್ ಶೆಟ್ಟಿಯವರ ಸಹಕಾರದಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಶನ್ ನ ಯಕ್ಷಾಶ್ರಯ ಯೋಜನೆಯಡಿಯಲ್ಲಿ ನಿರ್ಮಾಣವಾದ ಈ ಮನೆಯನ್ನು ಯಕ್ಷಧ್ರುವ ಪಟ್ಲ ಪೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿಯವರು ಕೀ ಹಸ್ತಾಂತರಿಸಿ ಯಾವುದೇ ಜಾತಿಯನ್ನು ಗುರುತಿಸಿ ಕಲಾವಿದರಿಗೆ ಸಹಾಯ ಹಸ್ತವನ್ನು ಪಟ್ಲ ಪೌಂಡೇಶನ್ ಮಾಡುತ್ತಿಲ್ಲ ದಾನಿಗಳ ಸಹಕಾರದಲ್ಲಿ ಅದೆಷ್ಟೋ ಬಡ ಕಲಾವಿದರಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ.
ಪಟ್ಲ ಪೌಂಡೇಶನ್ ನ ಪೋಷಕರಾದ ಶಶಿಧರ್ ಶೆಟ್ಟಿಯವರ ಸಹಕಾರದಿಂದ ಇವತ್ತು ಇಂತಹ ಹಲವಾರೂ ಬಡ ಕುಟುಂಬಗಳು ನೆಮ್ಮದಿಯ ಜೀವನವನ್ನು ಸಾಗಿಸುತ್ತಿವೆ. ಅವರ ಸೇವಾಗುಣ ಇತರರಿಗೆ ಪ್ರೇರಣೆ ಹಾಗೂ ಮಾದರಿ. ಅದೇ ರೀತಿ ಹಲವು ಮಂದಿ ದಾನಿಗಳು ಪಟ್ಲ ಪೌಂಡೇಶನ್ ಗೆ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಅದ್ದರಿಂದಾಗಿ ಈ ರೀತಿಯ ಸಮಾಜ ಮುಖಿ ಕೆಲಸಗಳು ಕಲಾವಿದರ ಕಣ್ಣೀರು ಒರಸುವ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಈ ವೇಳೆ ಮಾತನಾಡಿದ ಮನೋಜ್ ಅವರ ತಾಯಿ ಅದೆಷ್ಟೋ ವರುಷಗಳಿಂದ ಇದ್ದ ಕನಸು ಇವತ್ತು ನನಸಾಗಿದೆ ಇನ್ನಾದರೂ ನಾವು ನೆಮ್ಮದಿಯಿಂದ ನಿದ್ರೆ ಮಾಡುತ್ತೇವೆ ಇಷ್ಟೊಂದು ಒಳ್ಳೆಯ ಮನೆ ನಿರ್ಮಾಣವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ನಮ್ಮ ಕಷ್ಟಕ್ಕೆ ಆಸರೆಯಾದ ಶಶಿಧರ್ ಶೆಟ್ಟಿ ಹಾಗೂ ಪಟ್ಲ ಸತೀಶ್ ಶೆಟ್ಟಿಯವರಿಗೆ ನಮ್ಮ ಕುಟುಂಬ ಚಿರ ಋಣಿಯಾಗಿರುತ್ತೇವೆ ಎಂದು ಭಾವುಕರಾದರು.
ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕದ ಭುಜಬಲಿ ಧರ್ಮಸ್ಥಳ, ಸುರೇಶ್ ಶೆಟ್ಟಿ ಲಾಯಿಲ,ಪತ್ರಕರ್ತ ವಿನಯ ಕುಮಾರ್ ಸೇಮಿತ ಸೇರಿದಂತೆ ಗಣ್ಯರು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಹಲವಾರೂ ಗಣ್ಯರು ಬಂಧುಗಳು ಉಪಸ್ಥಿತರಿದ್ದರು.