ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಭಾರತದ ಸಂವಿಧಾನ ದಿನ ಆಚರಣೆ

ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ನ.26 ರಂದು ಸಂವಿಧಾನ ದಿನ ಆಚರಣೆಯನ್ನು ಮಾಡಲಾಯಿತು.

ಸಂಸ್ಥೆಯ ಸಂಚಾಲಕರು ಹಾಗೂ ನಿರ್ದೇಶಕರು ವಂದನೀಯ ಫಾದರ್ ನಿನೋದ್ ಮಸ್ಕರೇನ್ಹಸ್ ರವರು ಮಾತನಾಡಿ 1949 ನ.26 ರಂದು ಭಾರತದ ಸಂವಿಧಾನ ಅಂಗೀಕಾರವಾಯಿತು. 1950 ರ ಜನವರಿ 26 ರಂದು ಅಸ್ತಿತ್ವಕ್ಕೆ ಬಂದಿದ್ದನ್ನು ನಾವು ಕಾಣುತ್ತೇವೆ. ನವೆಂಬರ್ 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. ನ.26 ರ ದಿನವನ್ನು ಭಾರತದ ಸಂವಿಧಾನ ದಿನವನ್ನಾಗಿ ಆಚರಣೆ ಮಾಡುತ್ತೇವೆ.

ಹಿಂದುಳಿದ ವರ್ಗದ ಜನರು, ಶೋಷಿತ ಮಹಿಳೆಯರು ಹಾಗೂ ಮಕ್ಕಳು ಸಂವಿಧಾನದಿಂದ ತಮ್ಮ ಹಕ್ಕು ಪಡೆಯುವಲ್ಲಿ ಯಶಸ್ವಿಯಾಗಬೇಕು. ಸಂವಿಧಾನವನ್ನು ಪಾಲಿಸುವ ನಮ್ಮೆಲ್ಲರ ಮನಸ್ಥಿತಿ ಒಳ್ಳೆಯದಾಗಿದ್ದರೆ ಎಲ್ಲವೂ ಒಳ್ಳೆಯದಾಗಿ ನಡೆಯುತ್ತದೆ. ಆಗ ಸಮಾಜದಲ್ಲಿ ಶಿಸ್ತು, ಶಾಂತಿ, ಅಭಿವೃದ್ಧಿ ಸದಾ ಆಗುತ್ತದೆ, ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ, ಭಾರತ ದೇಶದಲ್ಲಿ ಶ್ರೇಷ್ಠವಾದ ಸಂವಿಧಾನವಿದೆ ಆದರೆ ಅದನ್ನು ಪಾಲಿಸುವವರು ಹೇಗೆ, ಅದನ್ನು ಜಾರಿಗೊಳಿಸುವವರು ಹೇಗೆ ಅದರ ಮೇಲೆ ದೇಶದ ಒಳಿತು ಹೊಂದಿಕೊAಡಿದೆ, ನಾವೆಲ್ಲಾರೂ ಸಂವಿಧಾನವನ್ನು ಅರ್ಥಮಾಡಿಕೊಂಡು ನಾವೆಲ್ಲಾ ಒಳ್ಳೆಯ ಜನರಾಗೋಣ, ಹಾಗೆ ಸಮಾಜಕ್ಕೆ ಒಳಿತನ್ನು ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಸಹ ನಿರ್ದೇಶಕರು ಅದ ವಂದನೀಯ ಫಾದರ್ ರೋಹನ್ ಲೋಬೋ ರವರು, ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಎಲ್ಲಾ ವಿಶೇಷ ಚೇತನ ಮಕ್ಕಳು ಮಕ್ಕಳು ಭಾಗವಹಿಸಿದ್ದರು.

ಸಹ ಶಿಕ್ಷಕ ರಮೇಶ್ ಹೆಚ್ ಕೆ ರವರು ವಂದನಾರ್ಪಣೆಗೈದು, ಮುಖ್ಯ ಶಿಕ್ಷಕಿ ದಿವ್ಯ ಟಿ. ವಿ. ರವರು ಕಾರ್ಯಕ್ರಮ ನಿರೂಪಿಸಿದರು.

error: Content is protected !!