ಬೆಳ್ತಂಗಡಿ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಡ್ಲಾಡಿ ಲಾಯಿಲ. ಇದರ ವಾರ್ಷಿಕ ಸಭೆಯು ಉತ್ಸಾಹಿ ಯುವಕ ಮಂಡಲ ಪಡ್ಲಾಡಿಯಲ್ಲಿ ಜುಲೈ 17 ರಂದು ಸಂಜೆ ಸಮಿತಿಯ ಅಧ್ಯಕ್ಷ ಪುರಂದರ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸಾದ್ ಶೆಟ್ಟಿ ಎಣಿಂಜೆ ಅಧ್ಯಕ್ಷರು
ಈ ಸಂದರ್ಭದಲ್ಲಿ ಹಿಂದಿನ ಜಮಾ ಖರ್ಚು ಹಾಗೂ ಇತರ ವಿಚಾರಗಳ ಬಗ್ಗೆ ವಿವರಗಳನ್ನು ಕಾರ್ಯದರ್ಶಿ ಸೂರಪ್ಪ ಪಡ್ಲಾಡಿ, ಕೋಶಾಧಿಕಾರಿ ರವಿ ಕುರುವ ನೀಡಿದರು. ನಂತರ 2022-23 ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅನಿಲ್ ವಿಕ್ರಂ ಡಿಸೋಜ,ಕಾರ್ಯದರ್ಶಿ
ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಎಣಿಂಜೆ, ಕಾಯದರ್ಶಿಯಾಗಿ ಅನಿಲ್ ವಿಕ್ರಂ ಡಿಸೋಜ, ಕೋಶಾಧಿಕಾರಿಯಾಗಿ ಸಂತೋಷ್ ದರ್ಖಾಸ್, ಜೊತೆ ಕಾರ್ಯದರ್ಶಿಯಾಗಿ ಕೃಷ್ಣ ಎಲ್, ಜೊತೆ ಕೋಶಾಧಿಕಾರಿಯಾಗಿ ಹರೀಶ್ ಕುಮಾರ್ ಎಲ್ , ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಂತೋಷ್ ದರ್ಖಾಸ್ .ಕೋಶಾಧಿಕಾರಿ
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಪ್ರಸಾದ್ ಶೆಟ್ಟಿ 33 ವರ್ಷಗಳ ಇತಿಹಾಸ ಇರುವ ಈ ಸಮಿತಿಯ ಅಧ್ಯಕ್ಷನಾಗಿ ಆಯ್ಕೆಯಾದದ್ದು ನನ್ನ ಯೋಗ ಕಳೆದ ಎರಡು ವರುಷಗಳಲ್ಲಿ ಕೋವಿಡ್ ನಿಂದಾಗಿ ಕಾರ್ಯಕ್ರಮ ನಡೆದಿಲ್ಲ ಅದರೆ ಈ ಬಾರಿ ಹಿರಿಯರ ಸಲಹೆ ಸೂಚನೆಯಂತೆ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜನೆ ಮಾಡಲಾಗುವುದು ಎಂದರು. ನಂತರ ಸಭೆಯಲ್ಲಿ ಅಗಸ್ಟ್ 18 ರಂದು 31 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಪಡ್ಲಾಡಿ ಶಾಲಾ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ಹಾಗೂ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ನಡೆಸುವ ಬಗ್ಗೆ ತೀರ್ಮಾನಿಸಿ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಕೊನೆಯಲ್ಲಿ ಉತ್ಸಾಹಿ ಯುವಕ ಮಂಡಲದ ಅಧ್ಯಕ್ಷ ವಿನಯ್ ಪಡ್ಲಾಡಿ ಧನ್ಯವಾದವಿತ್ತರು.