ಮುಂಡಾಜೆ: ಕಾಡಾನೆ ದಾಳಿ ಕೃಷಿ ಹಾನಿ

ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ದೂಂಬೆಟ್ಟು ವಾಳ್ಯದ ಕಜೆ ಪ್ರದೇಶದಲ್ಲಿ ಕೃಷಿ ತೋಟಗಳಿಗೆ ಇಂದು ಮುಂಜಾನೆ 4ರ ಸುಮಾರಿಗೆ ಕಾಡಾನೆ ದಾಳಿ ನಡೆಸಿದ್ದು,ಇಲ್ಲಿನ ರತ್ನಾ,ಬಾಬು ಗೌಡ,ಜಿನ್ನಮ್ಮ ಮೊದಲಾದವರ ಅಡಕೆ,ತೆಂಗು ಹಾಗೂ ಬಾಳೆ ಕೃಷಿಗೆ ಹಾನಿ ಉಂಟು ಮಾಡಿದೆ.

ಸ್ಥಳೀಯರು ಹೇಳುವ ಪ್ರಕಾರ ಒಂಟಿ ಸಲಗ ದಾಳಿ ನಡೆಸಿದ್ದು,ಇದು ಅರಿವಿಗೆ ಬಂದ ತಕ್ಷಣ ಅಕ್ಕಪಕ್ಕದ ಮನೆಗಳಿಗೆ ಮಾಹಿತಿ ನೀಡಲಾಯಿತು.ಇದರಿಂದ ಪ್ರದೇಶದ ಹೆಚ್ಚಿನ ತೋಟಗಳು ಆನೆ ದಾಳಿಗೆ ತುತ್ತಾಗುವುದು ತಪ್ಪಿದೆ.

ಸ್ಥಳೀಯರು ಸೇರಿ ದೊಂದಿ ಹಿಡಿದು,ಪಟಾಕಿ ಸಿಡಿಸಿ ಆನೆಯನ್ನು ಕಾಡಿನತ್ತ ಅಟ್ಟಿದ್ದಾರೆ. ಈ ಪ್ರದೇಶದಲ್ಲಿ ಆಗಾಗ ಕಾಡಾನೆಗಳು ದಾಳಿ ನಡೆಸುತ್ತಿದ್ದು ಇಲ್ಲಿನ ಕೃಷಿಕರು ಕಂಗಾಲಾಗಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ

error: Content is protected !!