ಬೆಳ್ತಂಗಡಿ: ತಾಲೂಕಿನಾದ್ಯಂತ ಬೇರೆ ಬೇರೆ ಕ್ರೀಡೆಗಳು ನಡೆಯುತಿದೆ.ಕ್ರೀಡಾಪಟುಗಳು ಭಾಗವಹಿಸುತಿದ್ದಾರೆ ಅದರೆ ಜಿಮ್ ಅಥವಾ ದೇಹದಾರ್ಢ್ಯ ಎಂಬುವುದು ಒಂದು ವಿಶೇಷ ಹಾಗೂ ವಿಶಿಷ್ಟ ವಾದದ್ದು. ತಾಲೂಕಿನ ಇತರ ಜಿಮ್ ಕೇಂದ್ರಗಳು ಮಾಡದಂತಹ ಪ್ರಯತ್ನವನ್ನು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಗುರುವಾಯನಕೆರೆ ರಾಕ್ ಜಿಮ್ ವತಿಯಿಂದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಚಾಂಪಿಯನ್ ಶಿಪ್ ಆಯೋಜನೆ ಮಾಡುತ್ತಿದೆ ಎಂದು ರಾಕ್ ಜಿಮ್ ನಿರ್ದೆಶಕ ನವಝ್ ಶರೀಫ್ ಕಟ್ಟೆ ಬೆಳ್ತಂಗಡಿ ಪತ್ರಕರ್ತರ ಸಂಘದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
6 ಬಾರಿ ಮಿಸ್ಟರ್ ಇಂಡಿಯಾ ಹಾಗೂ ಒಂದು ಬಾರಿ ಮಿಸ್ಟರ್ ಏಷ್ಯಾ ಆಗಿ ಹಾಗೂ ಬಾಡಿಬಿಲ್ಡರ್ ಆಸೋಸಿಯೇಷನ್ ಉಪಾಧ್ಯಕ್ಷ ರಮೀಝ್ ಅವರ ಎನ್ ಬಿಬಿಎ ಸಂಸ್ಥೆಯ ಮಾರ್ಗದರ್ಶನದಲ್ಲಿ ಸ್ಪರ್ಧೆಯು ಫೆ 20 ಶನಿವಾರ ಗುರುವಾಯನಕೆರೆಯ ಫಣತೀರ್ ಮಾಲ್ ನಲ್ಲಿ ನಡೆಯಲಿದೆ.
ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಉದ್ಘಾಟಕರಾಗಿ ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಕಾರ್ಯದರ್ಶಿ, ಎಸ್ ಡಿ ಎಮ್ ಎಜುಕೇಶನಲ್ ಟ್ರಸ್ಟ್ ಉಜಿರೆ ಇವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಿಕೊಳ್ಳಲಿದ್ದಾರೆ ಮುಖ್ಯ ಅತಿಥಿಗಳಾಗಿ ಹನೀಫ್ ಖಾನ್ ಕೊಡಾಜೆ, ನಿರ್ದೆಶಕರು,ಪ್ರಕೃತಿ ಪೌಂಡೇಶನ್ ದ.ಕ ಜಿಲ್ಲೆ, ವಸಂತ ಬಂಗೇರ ಮಾಜಿ ಶಾಸಕರು ಬೆಳ್ತಂಗಡಿ, ಮಿಥುನ್ ರೈ ಮಾಜಿ ಅಧ್ಯಕ್ಷರು ಯೂತ್ ಕಾಂಗ್ರೆಸ್ ದ.ಕ ಜಿಲ್ಲೆ, ವೆಲೈಂಟೆನ್ ಡಿ”ಸೋಜ,ಡಿವೈಎಸ್ ಪಿ ಬಂಟ್ವಾಳ, ಹಾಗೂ ಇನ್ನಿತರ ಹಲವು ಗಣ್ಯರು ಉಪಸ್ಥಿತರಿರುವರು.
ಸ್ಪರ್ದೆಯ ನೋಂದಾವಣೆಯು ಮದ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದೆ, 5 ಗಂಟೆಯಿಂದ 6 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಮೀಮ್, ಮಸೂದ್, ಶಮೀರ್, ಸುಜನ್ ರೈ, ಅನ್ಸಾಫ್, ಬದ್ರುದ್ದೀನ್ ಉಪಸ್ಥಿತರಿದ್ದರು.