ಬೆಳ್ತಂಗಡಿ ಶಾಸಕರಿಂದ ಸನತ್ ಮನೆಗೆ ಭೇಟಿ ನೀಡಿ‌ ಪೋಷಕರಿಗೆ ಸಾಂತ್ವನ:  ₹5 ಲಕ್ಷ ಪರಿಹಾರ ಘೋಷಣೆ

 

ಬೆಳ್ತಂಗಡಿ: ಎಳನೀರು, ಬಂಗರಪಲ್ಕೆ ಫಾಲ್ಸ್‌ ಬಳಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಸನತ್ ಶೆಟ್ಟಿ ಮೃತದೇಹ 23 ದಿನಗಳ ಬಳಿಕ ಫೆ.16, ಮಂಗಳವಾರ ಸಂಜೆ‌‌ ಲಭಿಸಿದ್ದು, ಈ ಸಂದರ್ಭದಲ್ಲಿ ಸನತ್ ಮನೆಗೆ ಭೇಟಿ‌ ನೀಡಿದ ಶಾಸಕ ಹರೀಶ್ ಪೂಂಜ ಮೃತ ಸನತ್ ಶೆಟ್ಟಿಯ ಅಂತಿಮ ದರ್ಶನ ಮಾಡಿ ಪೋಷಕರಿಗೆ ಸಾಂತ್ವನ ತಿಳಿಸಿದರು. ಅದಲ್ಲದೆ ಪ್ರಕೃತಿ ವಿಕೋಪ ‌ಪರಿಹಾರದಡಿ ಸನತ್ ಕುಟುಂಬಕ್ಕೆ ₹5 ಲಕ್ಷವನ್ನು ತಹಶೀಲ್ದಾರ್ ಮೂಲಕ ಇಂದು ವಿತರಿಸುವುದಾಗಿ ತಿಳಿಸಿದರು.

ಅದೇ ರೀತಿ ಮಾನವೀಯ ನೆಲೆಯಲ್ಲಿ‌ ಸುಮಾರು 21 ದಿನ ಕಾರ್ಯಾಚರಣೆಯಲ್ಲಿ ‌ಪಾಲ್ಗೊಂಡ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಳನೀರು ಗ್ರಾ.ಪಂ. ಸದಸ್ಯ ಪ್ರಕಾಶ್ ಜೈನ್ ಹಾಗೂ ವಿವಿಧ ಸಂಘ- ಸಂಸ್ಥೆಗಳ ಕಾರ್ಯಕರ್ತರು, ಸ್ಥಳೀಯರು ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದರು ಎಲ್ಲರ ಪ್ರಯತ್ನದ ಫಲವಾಗಿ ಸನತ್ ಶೆಟ್ಟಿಯ ಮೃತ ಶರೀರ ಸಿಕ್ಕಿದೆ ದುರ್ಗಮ ಪ್ರದೇಶದಲ್ಲಿ ಅತ್ಯಂತ ಕಷ್ಟದಾಯಕವಾದ ಕಾರ್ಯಚರಣೆಯಲ್ಲಿ‌ಯೂ ಸ್ವಯಂ ಸೇವಕರಾಗಿ ಪ್ರಾಮಾಣಿಕವಾಗಿ ದುಡಿದ ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆ ತಿಳಿಸಿದರು.

error: Content is protected !!