ಕೊನೆಗೂ ಬದುಕಲಿಲ್ಲ ಸುಹಾನಾ: ಝೀರೋ‌ ಟ್ರಾಫಿಕ್ ಮೂಲಕ‌ ಪುತ್ತೂರಿಂದ ಬೆಂಗಳೂರು ‌ತೆರಳಿದ್ದ ಯುವತಿ:

ಪುತ್ತೂರು: ಶ್ವಾಸಕೋಶದ ‌ಸಮಸ್ಯೆಯಿಂದ ಬಳಲುತ್ತಿದ್ದ ಸುಹಾನಾ ಎಂಬ ಯುವತಿ ಕೊನೆಗೂ ಬದುಕಲಿಲ್ಲ, ಝೀರೋ ಟ್ರಾಫಿಕ್ ‌ಮೂಲಕ ಬೆಂಗಳೂರಿನ ‌ವೈದೇಹಿ‌ ಆಸ್ಪತ್ರೆಗೆ ಸಾಗಿಸಲಾಗಿತ್ತು, ಸುಹಾನಾ ಆರೋಗ್ಯವಂತರಾಗಲೆಂದು ಸಾರ್ವಜನಿಕರೂ ಪ್ರಾರ್ಥನೆ ಸಲ್ಲಿಸಿದ್ದರು, ಆದರೆ ಸುಹಾನ‌ ಮೃತಪಟ್ಟಿರುವುದಾಗಿ ಚಿಕಿತ್ಸೆ ಕೊಡಿಸುತ್ತಿದ್ದ ಟ್ರಸ್ಟ್ ತಿಳಿಸಿದೆ.

ಹಾಸನ‌ ಜಿಲ್ಲೆ ಮೂಲದ ಸುಹಾನ ಅವರಿಗೆ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಕೊಡಿಸಲಾಗುತ್ತಿತ್ತು, ಶ್ವಾಸಕೋಶದ ಚಿಕಿತ್ಸೆಗಾಗಿ ಝಿರೋ ಟ್ರಾಫಿಕ್ ಮೂಲಕ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಲಾಗಿತ್ತು, ನಂತರ ಜೆ.ಪಿ ನಗರದ ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಕಾರುಣ್ಯ ನಿಧಿ ಟ್ರಸ್ಟ್ ತಿಳಿಸಿದೆ.

ಹಗಲು, ರಾತ್ರಿ ಶ್ರಮಪಟ್ಟು ವೈದ್ಯರು ಚಿಕಿತ್ಸೆ ನೀಡಿದೆ. ಹಲವು ಕಾಯಿಲೆಗಳಿಂದ ಸುಹಾನ ಬಳಲುತ್ತಿದ್ದರು, ಇತರ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಅದು ಗುಣಪಟ್ಟ ಎರಡು ತಿಂಗಳುಗಳ ನಂತರ ಶ್ವಾಸಕೋಶದ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದರು. ಅದರೆ ಚಿಕಿತ್ಸೆಗೆ ಸ್ಪಂದಿಸದೇ ಸುಹಾನ ಇಹಲೋಕ ತ್ಯಜಿಸಿದ್ದಾಳೆ ಎಂದು ಟ್ರಸ್ಟ್ ತಿಳಿಸಿದೆ.

error: Content is protected !!