ಚಾರ್ಮಾಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ: ಕಸ ಬಿಸಾಡಿದ ವ್ಯಕ್ತಿಗೆ ಬಿತ್ತು ರೂ 500 ದಂಡ

ಚಾರ್ಮಾಡಿ: ಸ್ವಚ್ಛ ಭಾರತ ಕಲ್ಪನೆಯಡಿಯಲ್ಲಿ ಉಜಿರೆ ಚಾರ್ಮಾಡಿ ರಸ್ತೆಯ ಇಕ್ಕೆಲಗಳಲ್ಲಿ ಬಿಸಾಡಿದಂತಹ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಿದ ಚಾರ್ಮಾಡಿ ಪಂಚಾಯತ್ ಹಾಗೂ ಚಾರ್ಮಾಡಿ ಧರ್ಮ ರಕ್ಷಣಾ ಸಮಿತಿಯವರು ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡಿದ್ದಾರೆ.ರಸ್ತೆಯ ಇಕ್ಕೆಲಗಳಲ್ಲೂ ರಾಶಿ ರಾಶಿ ಇದ್ದ ಪ್ಲಾಸ್ಟಿಕ್ ಬಾಟಲಿ ಹಾಗೂ ತ್ಯಾಜ್ಯವನ್ನು ಈ ಸಂದರ್ಭದಲ್ಲಿ ಸ್ವಚ್ಛ ಗೊಳಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಾರ್ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ನಿಜವಾಗಲೂ ತುಂಬಾ ಬೇಸರವಾಗುತ್ತಿದೆ ಜನರಿಗೆ ಸ್ವ ಚ್ಛತೆಯ ಬಗ್ಗೆ ಸರ್ಕಾರ ಅದೆಷ್ಟೊ ಮಾಹಿತಿಗಳನ್ನು ಪಂಚಾಯಿತಿ ಮೂಲಕ ನೀಡುತ್ತಾ ಬಂದರೂ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಬಿಸಾಡುವುದು ದುರಂತ. ಈ ರೀತಿ ಸಾರ್ವಜನಿಕರು ವರ್ತಿಸಿದರೆ ಪ್ರಧಾನಮಂತ್ರಿಯವರ ಸ್ವಚ್ಛ ಭಾರತ ಪರಿಕಲ್ಪನೆ ನನಸಾಗಲು ಹೇಗೆ ಸಾಧ್ಯ ಅದ್ದರಿಂದ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಸರ್ಕಾರ ಹಾಗೂ ಪಂಚಾಯಿತಿಗಳ ಮಾಹಿತಿಗಳನ್ನು ಸರಿಯಾಗಿ ಪಾಲಿಸಿ ಪರಿಸರವನ್ನು ಉಳಿಸುವಂತಹ ಕೆಲಸವನ್ನು ಮಾಡಬೇಕು ಎಂದರು .ಅದಲ್ಲದೇ ನಮಗೆ ಬಂ ಮಾಹಿತಿ ಪ್ರಕಾರ ವಿದ್ಯಾವಂತರೇ ಈ ರೀತಿ ಕಸ ರಸ್ತೆ ಬದಿ ಕಸ ಬಿಸಾಡುತ್ತಾ ಇರುವುದು ತುಂಬ ಬೇಸರ ತರುತ್ತಿದೆ.ಎಂದರು

ಸ್ವಚ್ಛತೆ ಸಮಯದಲ್ಲಿ ಕಸ ಬಿಸಾಡಿದ ವ್ಯಕ್ತಿ

ಪಂಚಾಯತ್ ಸಿಬ್ಬಂದಿಗಳು,ನೂತನ ಸದಸ್ಯರುಗಳು ಹಾಗೂ ಸಾರ್ವಜನಿಕರು ಸ್ವಚ್ಚತಾ ಕಾರ್ಯ ಮಾಡುತ್ತಿರುವ ಸಂದರ್ಭ ವಿದ್ಯಾವಂತರೊಬ್ಬರು ಮನೆಯಿಂದ ತಂದ ಕಸವನ್ನು ರಸ್ತೆ ಬದಿ ಬಿಸಾಡುತ್ತಿದ್ದಾಗ ಸಾರ್ವಜನಿಕರು ಅವರನ್ನು ತರಾಟೆಗೆ ತೆಗೆದುಕೊಂಡರು‌.ಅದಲ್ಲದೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದರು. ಈ ಸಂದರ್ಭದಲ್ಲಿ ಕ್ಷಮೆಯಾಚಿಸಿದ ಅವರಿಗೆ ಪಂಚಾಯತ್ ಅಭಿವೃದ್ಧಿ ಪ್ರಕಾಶ್ ಶೆಟ್ಟಿ ರೂ 500 ದಂಡ ವಿಧಿಸಿ ಈ ರೀತಿ ಮುಂದೆ ಮಾಡಬಾರದು ವಿದ್ಯಾವಂತರಾದ ನೀವೇ ಈ ರೀತಿ ವರ್ತಿಸಿದರೆ ಸಮಾಜಕ್ಕೆ ನಿಮ್ಮಿಂದ ಯಾವ ರೀತಿಯ ಸಂದೇಶ ನೀಡಲು ಸಾಧ್ಯ ಎಂದು ತಿಳಿ ಹೇಳಿದರು.

error: Content is protected !!