ಧರ್ಮಸ್ಥಳ ಚತುಷ್ಪಥ ರಸ್ತೆ ಲೋಕಾರ್ಪಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟ ಬಳಿಯಿಂದ‌ ಕಲ್ಲೇರಿವರೆಗೆ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚತುಷ್ಪಥ ರಸ್ತೆಯನ್ನು ಭಾನುವಾರ ‌ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರ. ಕಾರ್ಯದರ್ಶಿ ಶ್ರೀನಿವಾಸ್ ರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಸುಮಾರು 2 ಕಿ.ಮೀ. ದೂರದ ಧರ್ಮಸ್ಥಳ ಚತುಷ್ಪಥ ರಸ್ತೆಯನ್ನು ಈ ಹಿಂದಿನ ಸರಕಾರದಲ್ಲಿ  ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರ ಅವಧಿಯಲ್ಲಿ 2019ರ ಧರ್ಮಸ್ಥಳ ಭಗವಾನ್ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭ ಶಿಲಾನ್ಯಾಸ ನೆರವೇರಿಸಲಾಗಿತ್ತು. 7.50ಯಂತೆ ಎರಡು ಬದಿ ಒಟ್ಟು 15 ಮೀಟರ್ ನಷ್ಟು ರಸ್ತೆ ಅಗಲವಾಗಿದೆ.  ಎರಡು ರಸ್ತೆಗಳ ಮಧ್ಯೆ 2.50 ಮೀ. ಗಾರ್ಡನಿಂಗ್ ಗಾಗಿ ಡಿವೈಡರ್ ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿ, ಭಕ್ತರು ನಡೆದುಕೊಂಡು ‌ಹೋಗಲು ಸಹಾಯವಾಗುವಂತೆ ಫುಟ್ ಪಾತ್ ನಿರ್ಮಿಸಲಾಗಿದೆ.

error: Content is protected !!