ಉಜಿರೆಯಲ್ಲಿ ‘ನೀ ತಾಂಟ್ರೆ ಬಾ ತಾಂಟ್’ ಗಲಾಟೆ: ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ: ದೂರು ದಾಖಲು

ಉಜಿರೆ: ಉಜಿರೆ ಮುಖ್ಯ ದ್ವಾರದ ಬಳಿ ಕ್ಷುಲ್ಲಕ ಕಾರಣಕ್ಕಾಗಿ ಗುಂಪು ಘರ್ಷಣೆ ನಡೆದ ಪ್ರಕರಣ ಜ.23ರಂದು ಶನಿವಾರ ರಾತ್ರಿ ನಡೆದಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಉಜಿರೆ ಹೋಟೆಲ್ ಒಂದರಲ್ಲಿ ಯುವಕನೊಬ್ಬ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಹೋಟೆಲ್ ಗೆ ಬಂದ ಗಿರಾಕಿಗಳಲ್ಲಿ ಕೆಲವರು ಗುರಾಯಿಸಿ ನೋಡಿದ್ದರು ಎನ್ನಲಾಗಿದೆ. ಅವರಲ್ಲಿ ನೀನು ಯಾಕೆ ನನ್ನನ್ನು ಗುರಾಯಿಸಿ ನೋಡಿದ್ದಿ? ಎಂದು ಕೇಳಿದಾಗ ಅವರಲ್ಲಿ ಒಬ್ಬಾತ “ತಾಂಟ್ ರೇ ಬಾ ತಾಂಟ್” ಎಂಬುದಾಗಿ ಹೇಳಿ ಹೋಗಿದ್ದ ಎನ್ನಲಾಗಿದೆ. ಬಳಿಕ ತನ್ನ ಜೊತೆಯಲ್ಲಿದ್ದ ಇತರರಿಗೆ ತೋರಿಸಿ ಈತನನ್ನು ನೋಡಿಕೊಳ್ಳಿ ಎಂದು ಹೇಳಿದ್ದ ಎನ್ನಲಾಗಿದೆ. ‌ ಜ.23ರಂದು ರಾತ್ರಿ ಉಜಿರೆ ದ್ವಾರದ ಬಳಿ ಹಿಂದೆ ಗುರಾಯಿಸಿ ನೋಡಿದ್ದ ವ್ಯಕ್ತಿಗಳು ಹಾಗೂ ಆತನ ಜೊತೆಯಲ್ಲಿದ್ದ ಕೆಲವರು ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ‌, ತಡೆಯಲು ಬಂದ ಈತನ ಸಹೋದರನಿಗೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ‌.

error: Content is protected !!