ಗದ್ದೆ ಬೇಸಾಯ ಕಡಿಮೆಯಾಗಿ ಪಕ್ಷಿ ಸಂಕುಲಕ್ಕೆ ಹೊಡೆತ: ನಿತ್ಯಾನಂದ ಶೆಟ್ಟಿ ಅಭಿಮತ

ಬೆಳ್ತಂಗಡಿ: ಕಡಿಮೆಯಾಗುತ್ತಿರುವ ಗದ್ದೆ ಬೇಸಾಯವು ಪಕ್ಷಿ ಸಂಕುಲಗಳಿಗೆ ಹೊಡೆತ ನೀಡಿದೆ. ಪ್ರಕೃತಿ ಉಳಿದರೆ ನಾವು ಮತ್ತು ಉಳಿದ ಜೀವರಾಶಿಗಳು ಉಳಿಯುವ ಸಾಧ್ಯತೆಯಿದೆ ಎಂದು ಗುಬ್ಬಚ್ಚಿಗೂಡು ಅಭಿಯಾನದ ಸಂಚಾಲಕ ನಿತ್ಯಾನಂದ ಶೆಟ್ಟಿ ಅಭಿಪ್ರಾಯ ಪಟ್ಟರು.

ಅವರು ಸೂಳಬೆಟ್ಟು ಅಂಗನವಾಡಿ ಕೇಂದ್ರದ ವಠಾರದಲ್ಲಿ, ಫಲ್ಗುಣಿ ನವೋದಯ ಸ್ವಸಹಾಯ ಗುಂಪಿನ ವತಿಯಿಂದ ನಡೆದ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಎಂಬ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‌ಮಾಹಿತಿ ನೀಡಿದರು.

ಮನೆಗಳ ಬದಲಾದ ವಿನ್ಯಾಸ, ಫ್ಯಾನ್, ಪ್ರಖರ ಬೆಳಕು ಇತ್ಯಾದಿಗಳಿಂದಾಗಿ ಗುಬ್ಬಚ್ಚಿಗಳು ಮನುಷ್ಯನ ಸಹವಾಸವನ್ನು ಬಿಟ್ಟಿವೆ. ನಗರೀಕರಣದಿಂದಾಗಿ ಪ್ರಾಣಿ, ಪಕ್ಷಿಗಳಿಗೆ ತಿನ್ನಲು ಆಹಾರವಿಲ್ಲದಂತಾಗಿದೆ. ಅತಿಯಾದ ಪ್ಕಾಸ್ಟಿಕ್ ಬಳಕೆಯಿಂದಾಗಿ ಪರಿಸರ ಅಸಮತೋಲನಗೊಳ್ಳುತ್ತಿದೆ ಎಂದರು.

ಅಭಿಯಾನದ ಸಂಚಾಲಕಿ ರಮ್ಯಾ ಶೆಟ್ಟಿ ಪ್ರಾತ್ಯಕ್ಷಿಕೆ ನೀಡಿದರು.
ಗುಂಪಿನ‌ ಕಾರ್ಯದರ್ಶಿ ಪ್ರಣತಿ ನಾತು ಸ್ವಾಗತಿಸಿದರು. ಅಧ್ಯಕ್ಷೆ ರೇಖಾ ಮೆಹೆಂದಳೆ ವಂದಿಸಿದರು. ಸದಸ್ಯೆಯರಾದ ನಿವೇದಿತಾ ಜೋಶಿ, ಸುಜಾತಾ ಆಠವಳೆ, ರಮ್ಯಾ ಜೋಶಿ, ಛಾಯಾ ಗೋಖಲೆ, ಸಂಧ್ಯಾ ಗೋಖಲೆ, ಅನೂಷಾ ಮರಾಠೆ, ಸುಮಾ ಗೋಖಲೆ, ಪ್ರಜ್ಞಾ ಮೆಹೆಂದಳೆ ಉಪಸ್ಥಿತರಿದ್ದರು.

error: Content is protected !!