ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ಅಶ್ರಯದಲ್ಲಿ ನೊಂದಣಿಯಾದ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಹಾಗೂ ಕಾರ್ಮಿಕರ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಮರೋಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಬಿ.ಎಂ.ಎಸ್ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ. ಅವರು, ಭಾರತೀಯ ಮಜ್ದೂರ್ ಸಂಘ ಕಾರ್ಮಿಕರ ಸೌಲಭ್ಯಗಳನ್ನು ಸುಲಭವಾಗಿ ತೆಗೆಸಿಕೊಡಲು ನೆರವಾಗುತ್ತಿದೆ. ರಾಷ್ಟ್ರದ ಉನ್ನತಿಯ ಕಾರ್ಯದಲ್ಲಿ ಕಾರ್ಮಿರನ್ನು ಜೋಡಿಸುತ್ತಿದೆ. ಬಿ.ಎಂ.ಎಸ್. ನ ಸ್ಥಾಪಕರಾದ ದತ್ತೋ ಪಂತ ಥೇಂಗಡಿಜೀ ಅವರ ಕನಸನ್ನು ಸಾಕಾರ ಮಾಡಲು ಕಾರ್ಮಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಬಿ.ಎಂ.ಎಸ್ ನ ತಾಲೂಕು ಸಮಿತಿ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು, ಕಾರ್ಮಿಕರಿಗಿರುವ ಸೌಲಭ್ಯಗಳು ಹಾಗೂ ಜೀವನ ಭೀಮಾ ಹಾಗೂ ಸುರಕ್ಷಾ ಇನ್ಸೂರೆನ್ಸ್ ಯೋಜನೆಗಳು ಹಾಗೂ ಪ್ರಧಾನಮಂತ್ರಿ ಶ್ರಮ ಯೋಗಿಕ್ ಪಿಂಚಣಿ ಯೋಜನೆಗಳ ಮಾಹಿತಿ ನೀಡಿದರು.
ಕಾರ್ಯಕ್ರಮ ಸಂಯೋಜಕ ಬಿ.ಎಂ.ಎಸ್. ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ಕರ್ಕೇರ, ಬಿ.ಎಂ.ಎಸ್. ಪ್ರಾಯೋಜಿತ ಕೆಎಸ್ಆರ್ಟಿಸಿ
ಬಸ್ ಚಾಲಕರ ಸಂಘ ಉಡುಪಿ ಮಂಗಳೂರು ಜಿಲ್ಲೆಯ ಸ್ಥಾಪಕಾಧ್ಯಕ್ಷ ಡಿ. ಬಾಲಕೃಷ್, ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.
ಇದೆ ಸಂದರ್ಭ ಸುಮಾರು 25 ಕಾರ್ಮಿಕರಿಗೆ ‘ಕಾರ್ಮಿಕ ಕಾರ್ಡ್’ ವಿತರಿಸಲಾಯಿತು.
ಯಶೋಧರ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಪ್ರಮೋದ್ ಕುಲಾಲ್ ವಂದಿಸಿದರು.