ಬಿಲ್ಲವ ಮಹಾಮಂಡಲದ ಮಾಜಿ ಅಧ್ಯಕ್ಷ ಜಯ ಸುವರ್ಣರಿಗೆ ನುಡಿನಮನ

ವೇಣೂರು: ಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ಇತ್ತೀಚಿಗೆ ನಿಧನ ಹೊಂದಿದ ಬಿಲ್ಲವ ಮಹಾ ಮಂಡಲದ ಮಾಜಿ ಅದ್ಯಕ್ಷ ಜಯ ಸಿ. ಸುವರ್ಣ ಅವರಿಗೆ ನುಡಿನಮನ ನಡೆಯಿತು.
ಅ. 29ರಂದು ವೇಣೂರಿನ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷ ಪೂವಪ್ಪ ಪೂಜಾರಿ ವಹಿಸಿದ್ದರು.
ಶಿಕ್ಷಕರಾದ ಶಶಿಧರ್ ನುಡಿನಮನ ಸಲ್ಲಿಸಿದರು. ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ, ನ್ಯಾಯವಾದಿ ಮನೋಹರ ಕುಮಾರ್, ಬೆಳ್ತಂಗಡಿ ಬಿ.ಜೆ.ಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಉದ್ಯಮಿ ಸಂಜೀವ ಪೂಜಾರಿ, ಎ.ಪಿ.ಎಂ.ಸಿ ಅಧ್ಯಕ್ಷ ಚಿದಾನಂದ, ಎಲ್ದಕ್ಕ ಉಪಸ್ಥಿತರಿದ್ದರು. ಯುವವಾಹಿನಿ ವೇಣೂರು ಘಟಕದ ಸ್ಥಾಪಕಾಧ್ಯಕ್ಷ ನಿತೇಶ್ ಕೋಟ್ಯಾನ್ ಸ್ವಾಗತಿಸಿ, ಘಟಕದ ಅಧ್ಯಕ್ಷ ನವೀನ್ ಪಚ್ಚೇರಿ ವಂದಿಸಿದರು. ಶಿಕ್ಷಕ ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!