ಧರ್ಮಸ್ಥಳದಲ್ಲಿ‌ ಪರಿಸರ ಸ್ನೇಹಿ ಬ್ಯಾನರ್

ಧರ್ಮಸ್ಥಳ: ಶ್ರೀ ‌ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ ಡಿ.‌ ವೀರೇಂದ್ರ ಹೆಗ್ಗಡೆಯವರ‌ ಪಟ್ಟಾಭಿಷೇಕ 53ನೇ ವರ್ಧಂತ್ಯುತ್ಸವ ಸಂದರ್ಭ ವೇದಿಕೆಯ ಹಿಂದಿನ ಬ್ಯಾನರ್ ಆಗಮಿಸಿದವರ ಚಿತ್ತ ಸೆಳೆಯುತ್ತಿತ್ತು. ಸೀರೆಯನ್ನೇ ಬ್ಯಾನರ್ ಆಗಿ ಪರಿವರ್ತಿಸುವ ಮೂಲಕ ಪರಿಸರ ಸ್ನೇಹಿ ಬ್ಯಾನರ್ ಸಂದೇಶ ಸಾರುತ್ತಿತ್ತು.
ಸುಮಾರು 15 ವರ್ಷಗಳಿಂದ ಡಾ. ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಇಂತಹ ಪರಿಸರ ಸ್ನೇಹಿ ಬ್ಯಾನರ್ ಸರಳವಾಗಿದ್ದರೂ, ವೇದಿಕೆಯಲ್ಲಿ ರಾರಾಜಿಸುತ್ತದೆ.
ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಯವರು ಈ ವಿನೂತನ ಕಾರ್ಯವನ್ನು ಕಾರ್ಯಗತಗೊಳಿಸಿದ್ದಾರೆ. ಬೆಳ್ತಂಗಡಿಯ ಕಲಾವಿದರೊಬ್ಬರು ಬ್ಯಾನರ್ ನಲ್ಲಿ ಅಕ್ಷರಗಳನ್ನು ಮೂಡಿಸಿದ್ದಾರೆ. ಈ ಸೀರೆಯಲ್ಲಿ ಬರೆದ ಅಕ್ಷರಗಳನ್ನು ಬರೆಯಲು ಪೈಂಟ್ ಬಳಸಿಲ್ಲ, ಆದ್ದರಿಂದ ಕಾರ್ಯಕ್ರಮ ಮುಗಿದ ಬಳಿಕ ಅಕ್ಷರಗಳನ್ನು ಅಳಿಸಿ ಬಟ್ಟೆಯನ್ನು ಮತ್ತೆ ಬಳಸಲೂ ಸಾಧ್ಯವಿದೆ. ಆದ್ದರಿಂದ ಈ ವಿನೂತನ ಪ್ರಯತ್ನ ಜನಮೆಚ್ಚುಗೆಗೆ ಪಾತ್ರವಾಗಿದೆ.
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮರದ ಡೆಸ್ಕ್ ಬದಲಾಗಿ ಸಿಮೆಂಟ್ ಡೆಸ್ಕ್, ಜಲಮರುಪೂರಣ, ಸಾವಯುವ ಗೊಬ್ಬರ ತಯಾರಿ ಮೊದಲಾದ ಪರಿಸರ ಸ್ನೇಹಿ ಕಾರ್ಯಗಳನ್ನು ಕೈಗೊಂಡಿದ್ದು, ಬ್ಯಾನರ್ ನಂತಹ ಸರಳ ವಿಚಾರಗಳಿಗೂ ಆದ್ಯತೆ ನೀಡಿರುವುದು ಸಮಾಜಕ್ಕೆ ಮಾದರಿಯಾಗಿದೆ.

error: Content is protected !!