ಚಂದ್ಕೂರಿನಲ್ಲಿ ಆಯತ ಚಂಡಿಕಾ ಹೋಮ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಆಯತಚಂಡಿಕಾ ಹೋಮ ನಡೆಯಿತು.ವಿಶ್ವದಲ್ಲೆಡೇ ಕೊರೊನಾ ಎಂಬ ಮಹಾಮಾರಿಯಿಂದ ಜನ ಜೀವನ ತತ್ತರಿಸುವಂತಾಗಿದೆ.ಸಕಲ ಕಷ್ಟಗಳನ್ನೂ ದೂರ ಮಾಡಿ ನೆಮ್ಮದಿಯಿಂದ ಜನ ಜೀವನ ಸಾಗಲಿ ಎಂದು ಈ ಸಂದರ್ಭದಲ್ಲಿ ದೇವಿ ದುರ್ಗಾಪರಮೇಶ್ವರಿಯಲ್ಲಿ ಸಂಕಲ್ಪ ಮಾಡಿ ಪ್ರಾರ್ಥಿಸಿಕೊಳ್ಳಲಾಯಿತು ಪ್ರಸಾದ ವಿತರಣೆಯ ನಂತರ ಅನ್ನದಾನ ನಡೆಯಿತು. ಚಂದ್ಕೂರು ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರು ಕೊರೊನಾ ಮುಂಜಾಗರೂಕತೆ ವಹಿಸಿ ಭಕ್ತರಿಗೆ ಮಾಸ್ಕ್ , ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರದಲ್ಲಿ ದೇವರ ದರುಶನಕ್ಕೆ ಅವಕಾಶ ಮಾಡಿಕೊಟ್ಟು ಸಹಕರಿಸಿದರು.

error: Content is protected !!