
ಬೆಳ್ತಂಗಡಿ: ಅರ್ಥಿಕವಾಗಿ ತೀರಾ ಸಂಕಷ್ಟದಲ್ಲಿ ಇರುವ ಮನೆ ಇಲ್ಲದ ಅಶಕ್ತ ಬಡ ಕುಟುಂಬಗಳಿಗೆ ಉದ್ಯಮಿಗಳು ಸದಾ ಸಾಮಾಜಿಕ ಚಿಂತನೆಗಳ ಮೂಲಕ ಹಲವಾರೂ ಸೇವಾ ಯೋಜನೆಗಳಿಗೆ ದೊಡ್ಡ ಮಟ್ಟದ ಸಹಕಾರ ನೀಡುತ್ತಿರುವ ಬಡವರ ನೋವಿಗೆ ಸದಾ ಸ್ಪಂದಿಸುವ ಬೆಳ್ತಂಗಡಿ ಬಂಟರ ಸಂಘದ ಗೌರವ ಮಾರ್ಗದರ್ಶಕ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು ತನ್ನ ತಾಯಿ ಕಾಶಿ ಶೆಟ್ಟಿ ಸ್ಮರಣಾರ್ಥ ವಸತಿ ಯೋಜನೆಯಡಿ ನೀಡಿದ ಅರ್ಥಿಕ ಸಹಕಾರದಲ್ಲಿ ಹಾಗೂ ದಾನಿಗಳ ಸಹಕಾರದಲ್ಲಿ ಉಜಿರೆ ಬಂಟರ ವಲಯ ಸಮಿತಿಯ ಮುಂಡಾಜೆ ಮಂಜುಶ್ರೀ ನಗರದಲ್ಲಿ ನಿರ್ಮಾಣವಾದ ಕಾಶಿ ಸದನ ಇದರ ಗೃಹಪ್ರವೇಶ ಹಾಗೂ ಮನೆ ಹಸ್ತಾಂತರ ಕಾರ್ಯಕ್ರಮವು ಜೂ28 ರಂದು ನಡೆಯಿತು. ಶಶಿಧರ್ ಶೆಟ್ಟಿ ಯವರು ಮಾತೃಶ್ರೀ ಕಾಶಿ ಶೆಟ್ಟಿ ವಸತಿ ಯೋಜನೆಯಡಿ ಈಗಾಗಲೇ ತಾಲೂಕಿನ ವಿವಿಧ ವಲಯಗಳಲ್ಲಿ 9 ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ದೊಡ್ಡ ಮಟ್ಟದ ಅರ್ಥಿಕ ಸಹಕಾರವನ್ನು ನೀಡುತಿದ್ದು,ಅವರ ಈ ಸಾಮಾಜಿಕ ಚಿಂತನೆ ಇತರರಿಗೆ ಮಾದರಿ ಬಡವರ ಕಣ್ಣೀರು ಒರಸುವ ಕೆಲಸ ಅವರಿಂದ ಆಗುತ್ತಿದೆ. ಅವರಿಗೆ ಇನ್ನಷ್ಟು ಸಮಾಜಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಿ ದೈವದೇವರುಗಳು ಆಶೀರ್ವದಿಸಲಿ, ಎಂದು ಸಭೆಯಲ್ಲಿ ಗಣ್ಯರು ಶುಭಹಾರೈಸಿದರು. ಈ ವೇಳೆ ಮನೆ ಯಜಮಾನ ರಮೇಶ್ ಶೆಟ್ಟಿ ಕುಟುಂಬ ದೊಡ್ಡ ಸಹಕಾರ ನೀಡಿದ ಶಶಿಧರ್ ಶೆಟ್ಟಿ ಹಾಗೂ ಉಜಿರೆ ವಲಯ ಬಂಟರ ಸಂಘದ ಎಲ್ಲ ಪದಾಧಿಕಾರಿಗಳಿಗೆ,ವಿವಿಧ ರೀತಿಯಲ್ಲಿ ಸಹಾಯಹಸ್ತ ಚಾಚಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ
ವಿಜಯಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಗುರುವಾಯನಕೆರೆ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ
ಎಸ್.ಡಿ.ಎಂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ ಬಿ.ಎ. ಕುಮಾರ ಹೆಗ್ಡೆ , ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಪ್ರಾಧ್ಯಾಪಕ ಹರ್ಷಿತ್ ಶೆಟ್ಟಿ ನೆಯ್ಯಾಳು, ಉಜಿರೆ ಪಿಡಿಒ
ಪ್ರಕಾಶ್ ಶೆಟ್ಟಿ ನೊಚ್ಛ ,ತಾಲೂಕು
ಬಂಟರ ಯಾನೆ ನಾಡವರ ಸಂಘ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ,ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ,
ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಶ್ರೀ ದುರ್ಗಾ ಉಜಿರೆ,ಬಂಟರ ಉಜಿರೆ ವಲಯದ ಅಧ್ಯಕ್ಷ ರವೀಂದ್ರ ಶೆಟ್ಟಿ ಸುರಭಿ, ಉಪಾಧ್ಯಕ್ಷೆ ಪವಿತ್ರ ಸುಕುಮಾರ್ ಶೆಟ್ಟಿ ಮತ್ತು ವಿಜಯ ಕುಮಾರ್ ರೈ ಉಜಿರೆ ವಲಯದ ಕಾರ್ಯದರ್ಶಿ ಅಜಿತ್ ಕುಮಾರ್ ಕುಂಜರ್ಪ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಮುಕ್ಕುಡ ಮುಂಡಾಜೆ ಗ್ರಾಮ ಸಮಿತಿ ಅಧ್ಯಕ್ಷ ಪ್ರದೀಪ್ ಎನ್ ಶೆಟ್ಟಿ ಕಾರ್ಯದರ್ಶಿ ನವೀತ್ ಶೆಟ್ಟಿ ನೆಯ್ಯಾಳು , ಉಜಿರೆ ವಲಯದ ಮಾಜಿ ಅಧ್ಯಕ್ಷೆ ವನಿತಾ ವಿ ಶೆಟ್ಟಿ, ಯುವ ವಿಭಾಗದ ಪ್ರತೀಕ್ ನೊಚ್ಛ , ಉದ್ಯಮಿ ಪುಷ್ಪರಾಜ್ ಶೆಟ್ಟಿ ಪ್ರಕಾಶ್ ಎಲೆಕ್ಟ್ರಾನಿಕ್ಸ್, ರಾಜೇಶ್ ಶೆಟ್ಟಿ ಗಣೇಶ್ ಗ್ಯಾರೇಜ್ ಲಾಯಿಲ ಸೇರಿದಂತೆ ಇನ್ನಿತರರು ಆಗಮಿಸಿ ಶುಭ ಹಾರೈಸಿದರು.ಕಲಾವಿದ ನಾರಾಯಣ ಶೆಟ್ಟಿ ಮುಂಡಾಜೆ ತಂಡದಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.