
ಧರ್ಮಸ್ಥಳ : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, 2026- 27ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದ ಕಾರ್ಯಕ್ರಮ ಮತ್ತು”ಪೋಷಕರ – ಶಿಕ್ಷಕರ ಮಹಾ ಸಭೆಯು ಜೂನ್ 01 ರಂದು ವಿಜೃಂಭಣೆಯಿಂದ ವಿಶೇಷ ರೀತಿಯಲ್ಲಿ ನಡೆಯಿತು. ಶಾಲೆಯ ದ್ವಾರದಿಂದ ಮಕ್ಕಳನ್ನು ಬಲೂನ್ ಕೊಟ್ಟು ಬ್ಯಾಂಡ್ ,ವಾದ್ಯ ಘೋಷದೊಂದಿಗೆ ಅತಿಥಿಗಳಾದ ಶ್ರೀಮತಿ ಗಾಯತ್ರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರ್ಮಸ್ಥಳ, ಶ್ರೀಮತಿ ಪವಿತ್ರ ಸುಕುಮಾರ ಶೆಟ್ಟಿ , ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಕೆ.ನಂದ , ಗೌರವ ಸಲಹೆಗಾರರಾದ ಶ್ರೀಯುತ ರಾಜೇಂದ್ರ ಅಜ್ರಿ , ಶ್ರೀಯುತ. ನೀಲಕಂಠ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸುದರ್ಶನ್ ಕನ್ಯಾಡಿ, ಕಿರಣ್ , ಎಸ್‌ಡಿ ಎಂ ಸಿ ಯ ಸದಸ್ಯರು, ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ . ಎನ್ ಮತ್ತು ಶಿಕ್ಷಕ ವೃಂದ , ಪೋಷಕ ವೃಂದದವರು ಸ್ವಾಗತಿಸಿದರು. ಎಲ್ಲಾ ಮಕ್ಕಳಿಗೆ ಸಿಹಿಯನ್ನು ಹಂಚಿದರು. ನಂತರ ಪೋಷಕ ಶಿಕ್ಷಕರ ಮಹಾ ಸಭೆ ದೀಪ ಬೆಳಗಿಸುವುದರ ಮೂಲಕ ಶುಭ ಆರಂಭಗೊಂಡಿತು. ಪೋಷಕರ ಸಮ್ಮುಖದಲ್ಲಿ ಅತಿಥಿಗಳ ಕೈಯಿಂದ ಉಚಿತ ಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಲಾಯಿತು . ಪೋಷಕರಿಗೆ ಶೈಕ್ಷಣಿಕ ಮಾಹಿತಿಗಳನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪಾ .ಎನ್ ನೀಡಿದರು. ಪಿಡಿಒ ಗಾಯತ್ರಿ ಶೈಕ್ಷಣಿಕವಾಗಿ ಮಕ್ಕಳಿಗೆ ಪೋಷಕರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಪೋಷಕರ ಮತ್ತು ಸಮಿತಿಯವರ ಪಾತ್ರದ ಬಗ್ಗೆ ತಿಳಿಸಿ ಎಲ್ಲರಿಗೂ ಶುಭವನ್ನು ಹಾರೈಸಿದರು. ಹಿರಿಯ ವಿದ್ಯಾರ್ಥಿ ಹಾಗೂ ಗೌರವ ಸಲಹೆಗಾರ ರಾಜೇಂದ್ರ ಆಜ್ರಿ ಶುಭ ಹಾರೈಸಿದರು . ಸಹಶಿಕ್ಷಕರಾದ ಶ್ರೀಮತಿ ದೀಪಿಕಾ ಸ್ವಾಗತಿಸಿ ,ಶ್ರೀಮತಿ ಜೆಸಿಂತಾ ನೊರೊನ್ಹಾ ವಂದಿಸಿದರು.ಸಹ ಶಿಕ್ಷಕರಾದ ಶ್ರೀಮತಿ ಅರ್ಚನಾ. ಎಸ್ ಕಾರ್ಯಕ್ರಮ ನಿರೂಪಿಸಿದರು.