ಗುರುವಾಯನಕೆರೆ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ:

 

 

 

ಬೆಳ್ತಂಗಡಿ : ಖಾಸಗಿ ಕಾಲೇಜಿನ ವಿದ್ಯಾರ್ಥಿನಿ  ಕಾಲೇಜಿನ ಹಾಸ್ಟೆಲ್ ನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾಯನಕೆರೆಯಲ್ಲಿ  ನಡೆದಿದೆ.
ಕುವೆಟ್ಟು ಗ್ರಾಮದ  ಗುರುವಾಯನಕೆರೆಯ ಖಾಸಗಿ ಕಾಲೇಜಿನ ಚಿತ್ರದುರ್ಗ ಜಿಲ್ಲೆಯ   ದ್ವಿತೀಯ  ಪಿಯುಸಿ ವಿದ್ಯಾರ್ಥಿನಿ ಜೂನ್ 4 ರಂದು ಮಧ್ಯಾಹ್ನ ಊಟಕ್ಕೆಂದು ಹಾಸ್ಟೆಲ್ ಗೆ ತೆರಳಿ ಬಾಗಿಲು ಹಾಕಿಕೊಂಡು ಚೂಡಿದಾರ್ ಶಾಲಿನಿಂದ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಹಾಸ್ಟೆಲ್ ವಾರ್ಡನ್ ಗೆ ಬಾಗಿಲು ಹಾಕಿರುವುದು ಅನುಮಾನ ಬಂದು ತಕ್ಷಣ ಬಾಗಿಲು ಮುರಿದು ಒಳಗೆ ಪ್ರಚೇಶಿಸಿದಾಗ ನೇಣುಹಾಕಿಕೊಂಡಿರುವುದು ಕಂಡು ಬಂದಿದ್ದು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡು ಹೋದರೂ ಆವೇಳೆಗೆ ಆಕೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

error: Content is protected !!