ನರಸಿಂಹ ಗಡ, ಹತ್ತಿದ  ವ್ಯಕ್ತಿ  ಕಾಲು ನೋವಿನಿಂದ ಅಸ್ವಸ್ಥ,   ರಕ್ಷಣೆ::

 

 

ಬೆಳ್ತಂಗಡಿ: ಚಾರಣ ಪ್ರಿಯರ ನೆಚ್ಚಿನ ತಾಣ ಗಡಾಯಿಕಲ್ಲು ನರಸಿಂಹ ಗಡ ಇಲ್ಲಿಗೆ ಹೋಗಿದ್ದ ಪ್ರವಾಸಿಗನಿಗೆ ಕಾಲು ನೋವು ಉಂಟಾಗಿ ಕೆಳಗಿಳಿಯಲು ಸಾಧ್ಯವಾಗದೆ ಸ್ಥಳೀಯರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರು ಸೇರಿ ಆತನನ್ನು ಹೊತ್ತು ತಂದು ಕೆಳಗಿಳಿಸಿ ರಕ್ಷಿಸಿದ ಘಟನೆ ಜೂನ್ 4 ಗುರುವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ತಣ್ಣಿರುಪಂಥ ಗ್ರಾಮದ ಇಬ್ಬರು ಮಹಿಳೆಯರು ಸಹಿತ ಇಬ್ಬರು ಪುರುಷರು ಟಿಕೆಟ್ ಪಡೆದು ಬೆಳಿಗ್ಗೆ ಗಡಾಯಿಕಲ್ಲಿಗೆ ಹೋಗಿದ್ದರು.
ಗಡಾಯಿಕಲ್ಲಿನ ಮೆಟ್ಟಿಲು ಹತ್ತಿ ಮೇಲೇರಿದ ಬಳಿಕ ಮಹಮ್ಮದ್ ಶರೀಫ್ (30) ಅವರಿಗೆ ಕಾಲು ನೋವು ಉಂಟಾಗಿ ಮೇಲಿಂದ ಕೆಳಗೆ ಬರಲು‌ ಸಾಧ್ಯವಾಗಿಲ್ಲ.

ಈ ಬಗ್ಗೆ 112 ಗೆ ಕರೆ ಮಾಡಿ ಮಾಹಿತಿ ನೀಡಿದಾಗ ಬೆಳ್ತಂಗಡಿ ಅಗ್ನಿಶಾಮಕ ದಳದವರಿಗೆ ಪೊಲೀಸರು ಸ್ಥಳಕ್ಕೆ ಬರಲು ಮಾಹಿತಿ ನೀಡಿದ್ದಾರೆ. ಅದಲ್ಲದೇ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರಿಗೂ ಕರೆ ಮಾಡಿ ಸಹಾಯ ಮಾಡಲು ತಿಳಿಸಿ ಅವರೆಲ್ಲರೂ ಆಗಮಿಸುತ್ತಿದಂತೆ ಸ್ಥಳೀಯರು ಸೇರಿ ಗಡಾಯಿ ಕಲ್ಲಿಗೆ ಹತ್ತಿ ಅವರನ್ನು ಸುಮಾರು 3 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿ ಕೆಳಗೆ ತಂದಿದ್ದಾರೆ. ಬಳಿಕ ಅಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಬೆಳ್ತಂಗಡಿಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.

error: Content is protected !!