ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

 

 

 

ಬೆಳ್ತಂಗಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಶಾಸಕ  ಹರೀಶ್ ಪೂಂಜ ತಿಳಿಸಿದ್ದಾರೆ.

ಈ ಅನುದಾನದಡಿ ಕೆಳಕಂಡ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ:

ಕುಕ್ಕಳ ಗ್ರಾಮದ ಹಟ್ಟತ್ತೋಡಿಯಿಂದ ಕೆಂಪರಿಗೆಯವರೆಗೆ ರಸ್ತೆ– ರೂ.25.00 ಲಕ್ಷ

ಮಾಲಾಡಿ ಗ್ರಾಮದ ಪುರಿಯದಿಂದ ಕುರಿಯೋಡಿ ವರೆಗೆ ರಸ್ತೆ– ರೂ.25.00 ಲಕ್ಷ

ವೇಣೂರು ಗ್ರಾಮದ ಮೂಡ್ಲಾ ಕ್ರಾಸ್‌ನಿಂದ ನತ್ಯಟ್ಟವರೆಗೆ ರಸ್ತೆ – ರೂ.25.00 ಲಕ್ಷ

ನಾರಾವಿ ಗ್ರಾಮದ ದುಗಲಾಯಿ ಗುಡ್ಡೆ ರಸ್ತೆ – ರೂ.25.00 ಲಕ್ಷ

ಕಳೆಂಜ ಗ್ರಾಮದ ಬಂಡೇರಿಯಿಂದ ಬೇಂಗದಗಂಡಿವರೆಗೆ ರಸ್ತೆ – ರೂ.25.00 ಲಕ್ಷ

ನ್ಯಾಯತರ್ಪು ಗ್ರಾಮದ ಗೋವಿಂದೂರು ರಿಂದ ಕಣಿಯೂರು ಗ್ರಾಮದ ಕಾಪಿನಡ್ಕ -ಪೆರ್ದಡ್ಕ ರಸ್ತೆ – ರೂ.50.00 ಲಕ್ಷ

ಪಟ್ರಮೆ ಗ್ರಾಮದ ಮಣಿಯೇರು ರಸ್ತೆ – ರೂ.15.00 ಲಕ್ಷ

ಪಟ್ರಮೆ ಗ್ರಾಮದ ಓಟಕಜೆ ರಸ್ತೆ – ರೂ.10.00 ಲಕ್ಷ.

ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಸಮುದಾಯದ ಜನರಿಗೆ ಉತ್ತಮ ರಸ್ತೆ ಸೌಲಭ್ಯ ಲಭ್ಯವಾಗಲಿದ್ದು, ದೈನಂದಿನ ಸಂಚಾರ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ  ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

error: Content is protected !!