ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷದ ಪೋಸ್ಟ್: ಬಂಧನಕ್ಕೊಳಗಾಗಿದ್ದ ಬೆಳ್ತಂಗಡಿ ಯುವತಿಗೆ  ಜಾಮೀನು ಮಂಜೂರು:

 

 

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ ಗಳನ್ನು ಹಂಚಿಕೊಂಡು ಪ್ರಚಾರ ಮಾಡಿದ ಬಗ್ಗೆ ಕಂಕನಾಡಿ ನಗರ 353 (1), 353(2), 61 (2), 55 ಬಿ.ಎನ್.ಎಸ್.2023 ರಂತೆ ದಾಖಲಾದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಕರಂಬಾರು ನಿವಾಸಿಯಾಗಿರುವ ಯುವತಿಯೊಬ್ಬಳು ಹಂಚಿಕೊಂಡ ಬಗ್ಗೆ ತನಿಖೆಯಲ್ಲಿ ಕಂಡು ಬಂದಿರುವ ಬಗ್ಗೆ, ಮಾ 19 ರಂದು ಆಕೆಯನ್ನು ಬಂಧಿಸಿ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತು.
ನ್ಯಾಯಾದೀಶರು ಯುವತಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೂಚನೆಯಂತೆ ಜಾಮೀನು ಪಡೆಯುವಲ್ಲಿ ವಕೀಲರಾದ ಅಜಯ್ ಸುವರ್ಣ, ಸಂತೋಷ್ ಶೆಟ್ಟಿ ಸಹಕರಿಸಿದ್ಧಾರೆ.

error: Content is protected !!