
ಬೆಳ್ತಂಗಡಿ; ಕಳೆದ ಮೂರು ತಿಂಗಳಿನಿಂದ ಬೆಳ್ತಂಗಡಿಯಲ್ಲಿ ಕಾರ್ಯಚರಿಸುತಿದ್ದ ಇಂದಿರಾ ಕ್ಯಾಂಟಿನ್ ಅತಂತ್ರ ಸ್ಥಿತಿಯಲ್ಲಿದೆ.ನಿನ್ನೆ ಬಂದ್ ಆಗಿ ಮತ್ತೆ ಓಪನ್ ಅದರೂ, ಇವತ್ತು ಬೆಳಗ್ಗಿನಿಂದ ಸಂಬಳ ನೀಡದಿರುವುದರಿಂದ ಸಿಬ್ಬಂದಿಗಳು ಕೆಲಸ ನಿರ್ವಹಿಸದೇ ಇದ್ದುದರಿಂದ ಯಾವುದೇ ಆಹಾರ ಇಲ್ಲದೇ ಬಂದಂತಹ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ..ಕಳೆದ ಎರಡು ತಿಂಗಳಿನಿಂದ ಸರಿಯಾಗಿ ಸಂಬಳ ನೀಡುತ್ತಿಲ್ಲ ಸಂಬಳ ನೀಡದಿದ್ದರೆ ಬದುಕುವುದು ಹೇಗೆ ಎಂಬ ಅಳಲನ್ನು ಸಿಬ್ಬಂದಿಗಳು ತೋಡಿಕೊಂಡಿದ್ದಾರೆ. ನಿನ್ನೆ ಕೂಡ ಬಂದ್ ಮಾಡಲಾಗಿತ್ತು ಸಂಬಳ ಹಾಕುತ್ತೇವೆ ಕೆಲಸ ನಿರ್ವಹಿಸಿ ಎಂದು ಸಂಬಂಧ ಪಟ್ಟವರು ಹೇಳಿದ್ದರು ಅದರೆ ಯಾರೂ ಕೂಡ ಇಷ್ಟರವರೆಗೆ ನಮ್ಮಲ್ಲಿ ಮಾತನಾಡಿಲ್ಲ, ಸಂಬಳ ನೀಡದಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ.ನಮ್ಮ ಸ್ಥಿತಿ ಕೇಳುವವರು ಇಲ್ಲದಾಗಿದೆ ಬೇರೆ ಎಲ್ಲಿಯಾದರೂ ಕೆಲಸ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಕಷ್ಟ ಹೇಳಿಕೊಳ್ಳುತಿದ್ದಾರೆ.
ನಿನ್ನೆ ಆಹಾರ ಸಿದ್ಧಪಡಿಸದ ಕಾರಣ ಕ್ಯಾಂಟಿನ್ ಬಂದ್ ಆಗಿರುವ ಬಗ್ಗೆ ವರದಿ ಪ್ರಕಟವಾದ ಕೂಡಲೇ ರಕ್ಷಿತ್ ಶಿವರಾಂ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಂಬಂಧಪಟ್ಟ ಗುತ್ತಿಗೆದಾರರಲ್ಲಿ ಮಾತನಾಡಿ ಮತ್ತೆ ಒಪನ್ ಮಾಡಲಾಗಿತ್ತು. ಅದರೆ ಇವತ್ತು ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದೆ.