ಧರ್ಮಸ್ಥಳ ಪ್ರಕರಣ, ಚಿನ್ನಯ್ಯನಿಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ

 

 

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದ ಬುರುಡೆ  ಷಡ್ಯಂತ್ರದ ಬಗ್ಗೆ ಈಗಾಗಲೇ  ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯನಿಗೆ ದ.ಕ ಜಿಲ್ಲಾ ಕೋರ್ಟ್ ನ.24 ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದ್ದರೂ ಬಾಂಡ್ ಮತ್ತು ಇಬ್ಬರ ಜಾಮೀನುದಾರರ ಕೊರೆತೆಯಿಂದ 23 ದಿಗಳಿಂದ ಬಿಡುಗಡೆ ಬಾಗ್ಯ ಬಂದಿರಲಿಲ್ಲ.

ಆರೋಪಿ ಚಿನ್ನಯ್ಯನಿಗೆ ಸಹಾಯ ಮಾಡಲು ಪತ್ನಿ ಮಲ್ಲಿಕಾ ಮೂಲಕ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಡಿ.17 ರಂದು ಒಂದು ಲಕ್ಷದ ಬಾಂಡ್ ನೀಡಲು ಮತ್ತು ಇಬ್ಬರು ಜಾಮೀನದಾರರನ್ನು ಕರೆದುಕೊಂಡು ಬಂದು ಕಾನೂನು ಪಕ್ರಿಯೆ ಮುಗಿಸಿ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಶಿವಮೊಗ್ಗ ಜೈಲಿನತ್ತ ಪ್ರಯಾಣ ಮಾಡಿದ್ದಾರೆ.

ಇನ್ನೂ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬಿಡುಗಡೆ ಆದೇಶ ಪತ್ರ ಮೇಲ್ ಮೂಲಕ ಶಿವಮೊಗ್ಗ ಜೈಲಿಗೆ ತಲುಪಿದ ಬಳಿಕ ಜೈಲಿನಿಂದ ಚಿನ್ನಯ್ಯ ಡಿ.17 ರಂದು ಸಂಜೆ ವೇಳೆಗೆ ಬಿಡುಗಡೆಯಾಗಲಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

error: Content is protected !!