
ಬೆಳ್ತಂಗಡಿ: ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ವೇದಮೂರ್ತಿ ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜನವರಿ 10 ಹಾಗೂ 11 ರಂದು ನಡೆಯುವ ಅಷ್ಟೋತ್ತರ ಶತಸಂಖ್ಯೆ ನಾರಿಕೇಳ ಶ್ರೀ ಮಹಾಗಣಪತಿ ಹವನ, ನಾಗತನುತರ್ಪಣ ಹಾಗೂ ನಾಗಬ್ರಹ್ಮಮಂಡಲ ಸೇವೆ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಡಿ 15 ರಂದು ದೇವಸ್ಥಾನದಲ್ಲಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರೀ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ವೇಳೆ ವೇದಮೂರ್ತಿ ಮುಂಡೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳು ಮಡಂತ್ಯಾರು, ವಿದ್ಯೇಶ ಅಲೆವೂರಾಯ ಮಡಂತ್ಯಾರು, ರಂಗನಾಥ ನೂರಿತ್ತಾಯ ಕಡಂಬು, ಅನಂತಕೃಷ್ಣ ಇರ್ವತ್ರಾಯ ಮದ್ದಡ್ಕ, ಅನಂತ ಯಡಪಡಿತ್ತಾಯ ಕಳಾಯಿ, ಆದಿತ್ಯ ಬಾಗಲೋಡಿ, ಬೆಂಗಳೂರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಗ್ರಾ.ಪಂ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ, ಪ್ರಭಾಕರ ಆಚಾರ್ಯ, ಶೈಲೇಶ್ ಕುಮಾರ್ ಕುರ್ತೊಡಿ, ಚಂದ್ರರಾಜ್ ನೂಜೆಲು, ಗಣೇಶ್ ಭಂಡಾರಿ, ನಾಗೇಶ್ ಮೂಡಲ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮಗಳ ವಿವರ:
ಜ10 ಶನಿವಾರ ಬೆಳಿಗ್ಗೆ 9 ರಿಂದ ಶ್ರೀ ನಾಗಬ್ರಹ್ಮ ದೇವರ ಸನ್ನಿದಿಯಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಹ ವಾಚನ, ಸಪ್ತಶುದ್ಧಿ, ಪಂಚಾಮೃತ ಅಭಿಷೇಕ, ಪ್ರಧಾನ ಹೋಮ ಕಲಶಪೂರಣೆ, ಕಲಶಾಭಿಷಷೇಕ, ಗಣಪತಿ ಅಥರ್ವಶೀರ್ಷ ಪಾರಾಯಣ, ಸ್ಥಳದ ದೈವಗಳಿಗೆ ಕಲಾಶಾಭಿಷೇಕ ಪಂಚಪರ್ವ.ಮಧ್ಯಾಹ್ನ 12 ಗಂಟೆಗೆ ಅಷ್ಟೋತ್ತರ ಶತಸಂಖ್ಯೆ ನಾರಿಕೇಳ ಶ್ರೀ ಮಹಾಗಣಪತಿ ಹವನ, ಪೂರ್ಣಾಹುತಿ, ಮಹಾಪೂಜೆ,ಸಂಜೆ 6ರಿಂದ ನಾಗಬ್ರಹ್ಮನಿಗೆ ತನುತರ್ಪಣ ಸೇವೆ, ಮಹಾಪೂಜೆ ನಡೆಯಲಿದೆ. 11 ಭಾನುವಾರ ಬೆಳಿಗ್ಗೆ 9 ರಿಂದ ನಾಗಬ್ರಹ್ಮ ದೇವರಿಗೆ ಪಂಚಾಮೃತ ಅಭಿಷೇಕ, ನಾಗನಕಟ್ಟೆಯಲ್ಲಿ ಪಂಚಾಮೃತ ಅಭಿಷೇಕ, ತಂಬಿಲ, ನಲ್ಕೆತ್ತಾರಿನಲ್ಲಿ ಕೊಡಮಣಿತ್ತಾಯ ದೈವ ಸನ್ನಿಧಿಯಲ್ಲಿ ಪ್ರಾರ್ಥನೆ, ನರಸಿಂಹ ದೇವರ ಕಟ್ಟೆಯಲ್ಲಿಪ್ರಾರ್ಥನೆ ಹಾಗೂ ಪೂಜೆ, ಕುರ್ತೋಡಿಯ ಕರ್ತಜ್ಜನಿಗೆ ಹೂ ಹಣ್ಣು ಇಟ್ಟು ಪ್ರಾರ್ಥನೆ, ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಆಶ್ಲೇಷಬಲಿ, ನಾಗಬ್ರಹ್ಮ ಮಂಡಲ ವೇದಿಕೆಯ ಮಂಟಪ ಸಂಸ್ಕಾರ,ಮಂಜಸೇವೆ ದರ್ಶನ, ಮಹಾಪೂಜೆ, ಅನ್ನಸಂತರ್ಪಣೆ,ಸಂಜೆ 6 ರಿಂದ ಶ್ರೀ ನಾಗಬ್ರಹ್ಮ ದೇವರಿಗೆ ಹಾಲಿಟ್ಟು ಸೇವೆ, ನಾಗನಕಟ್ಟೆಯಲ್ಲಿ ಹಾಲಿಟ್ಟು ಸೇವೆ ಶ್ರೀ ಗೋಪಾಲಕೃಷ್ಣ ತಂತ್ರಿಗಳಿಂದ ನಾಗಬ್ರಹ್ಮಮಂಡಲ ಪೂಜೆ , ರಾತ್ರಿ 8 ರಿಂದ ನಾಗಪಾತ್ರಿ ಕಲ್ಲಂಗಳ ಶ್ರೀ ರಾಮಚಂದ್ರ ಕುಂಜಿತ್ತಾಯ ,ಶ್ರೀ ಕೃಷ್ಣ ಪ್ರಸಾದ ವೈದ್ಯ ಮತ್ತು ಬಳಗ ಇವರ ನೇತೃತ್ವದಲ್ಲಿ ನಾಗಕನ್ನಿಕೆಯಾಗಿ ಶ್ರೀ ಭಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ಇವರಿಂದ ನಾಗಬ್ರಹ್ಮಮಂಡಲ ಸೇವೆ ನಡೆಯಲಿದೆ.