ಪ್ರಜಾಪ್ರಕಾಶ ನ್ಯೂಸ್” ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯತ್: ಚರ್ಚ್ ರೋಡ್ ರಸ್ತೆ ಬದಿ ಅಪಾಯಕಾರಿ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ: ಮಳೆ ಕಡಿಮೆಯಾದ ಕೂಡಲೇ ಉತ್ತಮ ರೀತಿಯ ರಸ್ತೆ ,ಅಧ್ಯಕ್ಷ ಜಯಾನಂದ ಗೌಡ ಮಾಹಿತಿ:

 

 

ಬೆಳ್ತಂಗಡಿ: ಸವಣಾಲು ರಸ್ತೆಯ   ಚರ್ಚ್ ವರೆರ  ರಸ್ತೆ ಬದಿಯಲ್ಲಿ ಅಲ್ಲಲ್ಲಿ ಪೈಪ್ ಲೈನ್ ದುರಸ್ತಿಗಾಗಿ ತೆಗೆದ ಹೊಂಡಗಳನ್ನು ಸರಿಯಾಗಿ ಮುಚ್ಚದೇ ಇದ್ದುದರಿಂದ   ಮಳೆ ನೀರು ಅದರಲ್ಲಿ ನಿಂತು ಸಾರ್ವಜನಿಕರಿಗೆ ಅದರಲ್ಲೂ ಶಾಲಾ ಮಕ್ಕಳು ತೊಂದರೆ ಅನುಭವಿಸುವಂತಾಗಿತ್ತು.‌ಈ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ಸಾರ್ವಜನಿಕರಿಗೆ ವಾಹನ ಸವಾರಿಗೆ, ಹಾಗೂ ಶಾಲಾ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ವಿಸ್ಕ್ರತ ವರದಿಯನ್ನು ಜು 14 ರಂದು ಮಾಡಿತ್ತು.

ವರದಿಯ ಬೆನ್ನಲ್ಲೇ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಪಂದಿಸಿ ಕೆಲವೊಂದು ಅಪಾಯಕಾರಿ ದೊಡ್ಡ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡಿದೆ. ಅದಲ್ಲದೇ ಮಳೆ ಕಡಿಮೆಯಾದ ಕೂಡಲೇ ಈ ರಸ್ತೆ ಸಂಪೂರ್ಣ ಅಭಿವೃದ್ಧಿ ಗೊಂಡು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ. ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಪ್ರಜಾಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಪೈಪ್ ದುರಸ್ತಿಗಾಗಿ ಅಗೆದ ರಸ್ತೆ ಬದಿಯ ಗುಂಡಿಗಳಿಗೆ ಮುಕ್ತಿ ಯಾವಾಗ…! ಶಾಲಾ ಮಕ್ಕಳು ಮಾಡಿದ ತಪ್ಪೇನು.!, ಇದು ಚರ್ಚ್ ರೋಡಿನ ದುರಾವಸ್ಥೆ: ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ದ ಪೋಷಕರ ಹಿಡಿ ಶಾಪ..!

 

error: Content is protected !!