242 ಪ್ರಯಾಣಿಕರಿದ್ದ ಏರ್ ಇಂಡಿಯ ವಿಮಾನ ಪತನ: ಅಹಮದಬಾದ್ ನಲ್ಲಿ ಟೇಕ್ ಆಫ್ ಆಗುತ್ತಿದ್ದಂತೆ ಅಪಘಾತ:

 

 

ಗುಜರಾತ್: ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವು ಟೇಕ್ಅಫ್ ಆಗುವ ಕ್ಷಣದಲ್ಲೇ ಅಪಘಾತಕ್ಕೀಡಾಗಿ ಪತನಗೊಂಡ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.ಸುಮಾರು 242 ಪ್ರಯಾಣಿಕರಿದ್ದ ಏರ್ ಇಂಡಿಯ ವಿಮಾನ ಲಂಡನ್ ಗೆ ತೆರಳುತಿದ್ದ ವೇಳೆ ಟೇಕ್ ಅಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ.ಬೋಯಿಂಗ್ 787.8 ಡ್ರೀಮ್ ಲೈನರ್ ವಿಮಾನವು 230 ಪ್ರಯಾಣಿಕರು ಹಾಗೂ 12 ಮಂದಿ ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು.ಅಹಮದಬಾದ್ ಸಮೀಪದ ಮೇಘನಿ ನಗರ ಬಳಿ ಪತನಗೊಂಡಿದ್ದು, ವಿಮಾನ ಅಪಘಾತಕ್ಕೀಡಾದ ಸ್ಥಳವು ವಸತಿ ಪ್ರದೇಶ ಎಂದು ವರದಿಯಾಗಿದೆ.ಅಪಘಾತ ಸ್ಥಳದಲ್ಲಿ ದಟ್ಟ ಹೊಗೆ ಗೋಚರಿಸಿದೆ. ಅಗ್ನಿಶಾಮಕ ದಳ ಸೇರಿದಂತೆ ತುರ್ತು ಕಾರ್ಯಚರಣೆಗಳಿಗಾಗಿ ಸ್ಥಳಕ್ಕೆ ತಂಡಗಳು ಧಾವಿಸಿವೆ.ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

error: Content is protected !!