ರಾಷ್ಟ್ರೀಯ ಹೆದ್ದಾರಿಯ ಖುಷಿಯಲ್ಲಿದ್ದ ಬೆಳ್ತಂಗಡಿ ಜನತೆಗೆ ಶಾಕ್..! ಬೆಳ್ತಂಗಡಿಯಲ್ಲೂ ಕಾರ್ಯಚರಿಸಲಿದೆಯೇ ಸುಂಕ ವಸೂಲಾತಿ ಕೇಂದ್ರ..?: ಪಣಕಜೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಗೇಟ್…!

 

 

ಬೆಳ್ತಂಗಡಿ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಭರದಿಂದ ಸಾಗುತ್ತಿದ್ದು ರಸ್ತೆ ಅಗಲೀಕರಣಗೊಂಡು ಅಭಿವೃದ್ದಿಯಾಗುತ್ತಿರುವ ಸಂತೋಷ ಸಾರ್ವಜನಿಕರಿಗೆ ಒಂದೆಡೆಯಾದರೆ ಇನ್ನು ಕೆಲವೇ ವರ್ಷಗಳಲ್ಲಿ ಸುಂಕ ಪಾವತಿಸಿ ವಾಹನ ಸವಾರರು  ಸಂಚರಿಸಬೇಕಾದ ಶಾಕಿಂಗ್ ನ್ಯೂಸ್ ಎಲ್ಲೆಡೆ ಹರಿದಾಡುತ್ತಿದೆ . ರಾಷ್ಟ್ರೀಯ ಹೆದ್ದಾರಿಯ ಪಣಕಜೆ ಎಂಬಲ್ಲಿ ಸುಂಕ ವಸೂಲಾತಿ ಕೇಂದ್ರ ಸ್ಥಾಪನೆಯಾಗಲಿರುವ ಮಾಹಿತಿ ಇದ್ದು.. ಈ ಬಗ್ಗೆ ಕಾಮಗಾರಿಗೆ ಚಾಲನೆ ದೊರಕಿದೆ,ಇದಕ್ಕಾಗಿ ಈಗಾಗಲೇ ರಸ್ತೆ  ಕಾಂಕ್ರೀಟಿಕರಣಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ ಟೋಲ್ ಪ್ಲಾಜಾ ನಿರ್ಮಾಣವಾಗುತ್ತದೆ ಎಂಬ ಮಾಹಿತಿ ದೊರಕಿದೆ. ಬೆಳ್ತಂಗಡಿ ತಾಲೂಕಿನ ಜನತೆಗೆ  ಸುಂಕ ಕಟ್ಟಿ ಸಂಚರಿಸಬೇಕಾದ ಅನೀವಾರ್ಯತೆ ಎದುರಾಗಲಿದೆ. ಈಗಾಗಲೇ ಚಾರ್ಮಾಡಿ ಘಾಟ್, ಪೆರಿಯಶಾಂತಿ ಉಜಿರೆ, ಸೇರಿದಂತೆ ಹೆದ್ದಾರಿ ಅಭಿವೃದ್ದಿಗೆ ಅನುದಾನ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆ ನಡೆದು ಕೆಲವೇ ಸಮಯಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.ಕೇವಲ ಟೋಲ್ ನಿರ್ಮಾಣದ ವ್ಯವಸ್ಥೆಗೆ ಬೇಕಾಗುವ ಕಾಮಗಾರಿ ಮಾತ್ರ ಮಾಡುವಂತದ್ದು
5 ವರ್ಷಗಳ ಕಾಲ ಸುಂಕ ವಸೂಲಾತಿ ಅಥವಾ ಟೋಲ್ ಕಾರ್ಯಚರಿಸುವ ಪ್ರಸ್ತಾಪ ಇಲ್ಲ  ಎಂಬ ಮಾಹಿತಿಯೂ ಲಭ್ಯವಾಗಿದೆ.

ಏನಿದ್ದರೂ ಇನ್ನು ಕೆಲವೇ ವರ್ಷಗಳಲ್ಲಿ ಬೆಳ್ತಂಗಡಿ ತಾಲೂಕಿನ ಜನತೆ ಕೂಡ  ಸಂಚರಿಸಬೇಕಾದರೆ ಸುಂಕ ಪಾವತಿಸಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

error: Content is protected !!