ದ್ವಿಚಕ್ರ ವಾಹನದ ಮೇಲೆ ಬಿದ್ದ ವಿದ್ಯುತ್ ತಂತಿ: ಯಕ್ಷಗಾನ ಕಲಾವಿದ ಸಾವು,ಸಹ ಸವಾರ ಪಾರು:

 

 

 

ಉಡುಪಿ:ದ್ವಿಚಕ್ರ ವಾಹನದಲ್ಲಿ ಬರುತಿದ್ದ ವೇಳೆ ವಿದ್ಯುತ್ ತಂತಿ  ಬೈಕ್ ಮೇಲೆ ಬಿದ್ದ ಪರಿಣಾಮ ಯಕ್ಷಗಾನ ಕಲಾವಿದ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಆಗುಂಬೆ ಬಳಿ ನಡೆದಿದೆ.

 

 

 

 

 

ಕೊಪ್ಪ ಸಮೀಪ ಸೂರಾಲು ಮೇಳದ ಯಕ್ಷಗಾನ ಆಯೋಜನೆ ಮಾಡಲಾಗಿದ್ದು, ಅದರೆ ಮಳೆಯ ಕಾರಣ ಪ್ರದರ್ಶನ ರದ್ದಾದ ಕಾರಣ ಕಲಾವಿದರಾದ ರಂಜಿತ್ ಹಾಗೂ ವಿನೋದ್ ರಾಜ್ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂತಿರುಗಿ ಬರುತ್ತಿರುವ ವೇಳೆ ಮರದ ಕೊಂಬೆ ಮುರಿದು ವಿದ್ಯುತ್ ತಂತಿಗೆ ಬಿದ್ದ ಪರಿಣಾಮ ತಂತಿ ತುಂಡಾಗಿ ದ್ವಿಚಕ್ರ ಚಲಾಯಿಸುತಿದ್ದ ರಂಜಿತ್ ಮೇಲೆ ಬಿದ್ದು ಅವರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ಕೊಂಡು ಹೋದರೂ ಅಷ್ಟೊತ್ತಿಗಾಗಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ, ಸಹ ಸವಾರ ಸ್ತ್ರೀ ಪಾತ್ರದಾರಿ ವಿನೋದ್ ರಾಜ್ ಅಪಾಯದಿಂದ ಪಾರಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!