ಅಪರೇಷನ್ ಸಿಂಧೂರ್,ಪಾಕ್ ನ 9 ಉಗ್ರ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ: 100 ಕ್ಕಿಂತಲೂ ಅಧಿಕ ಉಗ್ರರು ಫಿನೀಶ್: ಸೇನೆಯ ರಣ ಬೇಟೆ , ದೇಶದೆಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ:

 

 

ಬೆಂಗಳೂರು:ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತಿಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿವೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ನಡೆಸಿದ “ಆಪರೇಷನ್ ಸಿಂಧೂರ” ಎಂಬ ಕಾರ್ಯಾಚರಣೆಯು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ನೆಲೆ ಮತ್ತು ಲಾಹೋರ್ ಮತ್ತು ಸಿಯಾಲ್ಕೋಟ್ ಬಳಿಯ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಮರ್ಕಾಜ್‌ನಂತಹ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿದೆ. ಈ ದಾಳಿಯಲ್ಲಿ 100 ಕ್ಕಿಂತಲೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

 

 

ಈ ದಾಳಿಯು “ಕೇಂದ್ರೀಕೃತ, ವಿವೇಚನೆಯ ಹಾಗೂ ಮತ್ತು ಉಲ್ಬಣವಾಗದಂತಹ” ಕಾರ್ಯಾಚರಣೆ ಎಂದು ಎಂದು ಹೇಳಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಲ್ಲ, ಭಾರತವು ನಿಖರ ಗುರಿಗಳ ಆಯ್ಕೆ ಮತ್ತು ದಾಳಿಗಳಲ್ಲಿ ಸಂಯಮವನ್ನು ಪ್ರದರ್ಶಿಸಿದೆ. ಎಲ್‌ಇಟಿ ಮತ್ತು ಜೆಇಎಂ ಶಿಬಿರಗಳನ್ನು ಹೊಂದಿರುವ ಪಿಒಕೆಯ ಕೋಟಿಲ್ ಮತ್ತು ಮುಜಫರಾಬಾದ್ ಕೂಡ ಗುರಿಯಾಗಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ನೂರಕ್ಕಿಂತಲೂ ಅಧಿಕ  ಉಗ್ರರನ್ನು ಸದೆಬಡಿದ ಭಾರತೀಯ ಸೇನೆಯ ಕಾರ್ಯಾಚರಣೆಗೆ   ದೇಶದೆಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯುತ್ತಿದೆ.

error: Content is protected !!