ಬೆಳ್ತಂಗಡಿ: ಕಳೆದ ಹಲವಾರೂ ವರ್ಷಗಳಿಂದ ನಾರಾವಿಯಲ್ಲಿ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿಟ್ಟ ಯಾನೆ ಸುಧಾಕರ (51ವರ್ಷ) ಅವರ ಮೃತ ದೇಹ ಸಂಶಯಾಸ್ಪದ ರೀತಿಯಲ್ಲಿ ಇಂದು ಸಂಜೆ ಅಂಡಿಂಜೆಯಲ್ಲಿ ಪತ್ತೆಯಾಗಿದೆ.
ಸಂಜೆ ಅವರ ಮೃತದೇಹ ಅಂಡಿಂಜೆ ವಿದ್ಯುತ್ ಪರಿವರ್ತಕದ ಬಳಿ ಪತ್ತೆಯಾಗಿದ್ದು, ವಿದ್ಯುತ್ ಶಾಕ್ ನಿಂದ ಅಥವಾ ಬೇರೆ ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆಂದು ತನಿಖೆಯಿಂದ ಇನ್ನಷ್ಟೆ ತಿಳಿದು ಬರಬೇಕಾಗಿದೆ.
ಮೃತರು ಲೈನ್ ಮ್ಯಾನ್ ವೃತ್ತಿಯನ್ನು ಉತ್ತಮವಾಗಿ ನಿರ್ವಹಿಸುತ್ತ, ಊರಿನಲ್ಲಿ ಎಲ್ಲರೊಂದಿಗೂ ಅನ್ಯೋನ್ಯ ಬಾಂಧವ್ಯ ಹೊಂದಿದ್ದರು.ಇವರು ಕುಟುಂಬ ವರ್ಗದವರನ್ನು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.