ಬೆಳ್ತಂಗಡಿ:ಜಾರಿಗೆ ಬೈಲು ಎಂಬಲ್ಲಿ ಹೆದ್ದಾರಿ ಬದಿಯ ಮರದ ಗೆಲ್ಲು ಬಿದ್ದು ಬೈಕ್ಕಲ್ಲಿ ಬರುತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾ 20 ಗುರುವಾರ ಸಂಜೆ ನಡೆದಿದೆ.
ಮೃತ ಯುವಕನನ್ನು ಬೆಳಾಲು ನಿವಾಸಿ ಪ್ರವೀಣ್ (25) ಗುರುತಿಸಲಾಗಿದೆ.ಮಂಗಳೂರಿನ ಖಾಸಗಿ ಬ್ಯಾಂಕೊಂದರಲ್ಲಿ ಲೋನ್ ಸೆಕ್ಷನ್ ನಲ್ಲಿ ಕೆಲಸ ಮಾಡುತಿದ್ದ ಬೆಳಾಲಿನ ಪ್ರವೀಣ್ ಅವರು ಕೆಲಸ ಮುಗಿಸಿಕೊಂಡು ಉಪ್ಪಿನಂಗಡಿ ಗುರುವಾಯನಕೆರೆ ಹೆದ್ದಾರಿಯಲ್ಲಿ ಬರುತಿದ್ದ ವೇಳೆ ಜಾರಿಗೆ ಬೈಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಮಾವಿನ ಮರದ ದೊಡ್ಡ ಗೆಲ್ಲು ಮುರಿದು ಅವರ ಬೈಕ್ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ , ತಕ್ಷಣ ಸ್ಥಳೀಯರು ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ತರುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಎಂದು ತಿಳಿದು ಬಂದಿದೆ.