ಮಹಾ ಕುಂಭಮೇಳ ಮುಕ್ತಾಯ: ಪ್ರಯಾಗರಾಜ್‌ನಲ್ಲಿ ಸ್ವಚ್ಛತಾ ಅಭಿಯಾನ

ಪ್ರಯಾಗರಾಜ್: ಕೋಟ್ಯಾಂತರ ಭಕ್ತಾಧಿಗಳು ಪಾಲುಪಡೆದ ಮಹಾ ಕುಂಭಮೇಳ ಮುಕ್ತಾಯವಾಗಿದ್ದು, ಆದರೆ ಸ್ಥಳದಲ್ಲಿ ಕಸದ ರಾಶಿಯೇ ಬಿದ್ದಿದೆ.

ಮಹಾ ಕುಂಭಮೇಳದ ಸಮಯದಲ್ಲಿ ಸ್ವಚ್ಛತೆ ಕಾಪಾಡಲು ಅಲ್ಲಿನ ಸರಕಾರ ಕಾರ್ಮಿಕರನ್ನು ನಿಯೋಜಿಸಿದರೂ ಅಲ್ಲಲ್ಲಿ ಕಸ ರಾಶಿ ಬಿದ್ದಿವೆ. ಈ ಬೆನ್ನಲ್ಲೆ 15 ದಿನಗಳ ವಿಶೇಷ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ತಿಳಿಸಿದೆ.

ಕುಂಭಮೇಳದ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಸರಕಾರ ಮೇಳೆದ ಸಂದರ್ಭದಲ್ಲಿ ನೈರ್ಮಲ್ಯ ಕಾಪಾಡಿದ ಕಾರ್ಮಿಕರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ, ಗೌರವಿಸಿದೆ.

ಸ್ವಚ್ಛತಾ ಅಭಿಯಾನದ ನೇತೃತ್ವವನ್ನು ವಿಶೇಷ ಅಧಿಕಾರಿ ಆಕಾಂಕ್ಷಾ ರಾಣಾ ಅವರು ವಹಿಸಿದ್ದಾರೆ.

error: Content is protected !!