ಬೆಂಗಳೂರು: ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ನಡೆದಿದೆ.
ಐವರು ಸ್ನೇಹಿತರು ಕಾರಿನಲ್ಲಿ ಧಾರವಾಡದಿಂದ ದೇವನಹಳ್ಳಿಯ ವಿಜಯಪುರಕ್ಕೆ ನಿನ್ನೆ ಹೊರಟಿದ್ದರು. ಆದರೆ ರಸ್ತೆ ಮಧ್ಯೆ ಕಾರು ಭೀಕರ ಅಪಘಾತವಾಗಿ, ಕಾರು ಚಾಲಕ ಮೊಹಮ್ಮದ್ ಯೂನಿಸ್ (20) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿದೆ.